ಸೂಕ್ತ ಮೂಲಸೌಲಭ್ಯ ಸೇರಿದಂತೆ ಮಾನದಂಡ ಪಾಲಿಸದ ರಾಜ್ಯದ 27 ಮೆಡಿಕಲ್ ಕಾಲೇಜಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ದಂಡ ವಿಧಿಸಿದೆ.
ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಮೆಡಿಕಲ್ ಕಾಲೇಜು ನಿರ್ವಹಣೆಯ ಮಾನಂಡದ ಪ್ರಕಾರ ಮೌಲಸೌಲಭ್ಯ ಕಾಪಾಡಿಕೊಳ್ಳದ 11 ಖಾಸಗಿ ಹಾಗೂ 16 ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗ ಕನಿಷ್ಠ 2ರಿಂದ 15 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿದೆ. ಅಲ್ಲದೇ ಶೀಘ್ರದಲ್ಲೇ ಮಾನದಂಡದ ಪ್ರಕಾರ ಸೂಕ್ತ ಸೌಲಭ್ಯಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದೆ ಎಂದು ಅವರು ತಿಳಿಸಿದರು.
ಯಾವ ಮೆಡಿಕಲ್ ಕಾಲೇಜ್, ಆಸ್ಪತ್ರೆಗಳಿಗೆ ಎಷ್ಟು ದಂಡ?
ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜು- 15 ಲಕ್ಷ ರೂ.
ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ0- 15 ಲಕ್ಷ ರೂ.
ಕಲಬುರಗಿಯ ಜಿಮ್ಸ್ ಆಸ್ಪತ್ರೆ- 15 ಲಕ್ಷ ರೂ.
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ- 15 ಲಕ್ಷ ರೂ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ- 15 ಲಕ್ಷ ರೂ.
ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ- 15 ಲಕ್ಷ ರೂ.
ಚಾಮರಾಜನಗರದ ಮಿಮ್ಸ್- 3 ಲಕ್ಷ ರೂ.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ- 3 ಲಕ್ಷ ರೂ.
ಮೈಸೂರು ವೈದ್ಯಕೀಯ ಕಾಲೇಜು, ಸಂಶೋಧನಾ ಸಂಸ್ಥೆ 3 ಲಕ್ಷ ರೂ.
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ 3 ಲಕ್ಷ ರೂ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ- 3 ಲಕ್ಷ ರೂ.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ 3 ಲಕ್ಷ ರೂ.
ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆ- 2 ಲಕ್ಷ ರೂ.