ಹಲ್ಲುನೋವುವಿನಿಂದ ಬಳಲುತ್ತಿರುವವರು ಈ ಕೆಳಗೆ ನೀಡಿರುವ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ಫಲಿತಾಂಶ ನಿಮಗೇ ತಿಳಿಯುವುದು.
ನಾಲ್ಕು ಬಟ್ಟಲು ನೀರಿಗೆ 5-6 ವೀಳ್ಯೇದೆಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ, ನಂತರ ಅದನ್ನು ಶೋಧಿಸಿ, ಆ ಕಷಾಯದಿಂದ ದಿನಕ್ಕೆ ಮೂರು ಬಾರಿ ಎರಡು ದಿನಗಳ ಕಾಲ ಬಾಯಿ ಮುಕ್ಕಳಿಸಿ ಹಲ್ಲುನೋವಿನಲ್ಲಿ ಗುಣ ಕಂಡುಬರುತ್ತದೆ.
ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಉಪಶಮನವಾಗುವುದು. ಕಾಳುಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹೆಚ್ಚುವುದರಿಂದ ಕೆಟ್ಟ ನೀರೆಲ್ಲ ಸುರಿದುಹೋಗಿ ನೋವು ಕಡಿಮೆಯಾಗುತ್ತದೆ.
ವಸಡಿಗೆ ಜೇನುತುಪ್ಪವನ್ನು ಹಚ್ಚಿ, ಜೇನಿನಲ್ಲಿ ಅದ್ದಿದ ಹತ್ತಿಯನ್ನು ದವಡೆಯಲ್ಲಿ ಇಟ್ಟುಕೊಂಡರೆ ಹಲ್ಲು ಮತ್ತು ವಸಡಿನ ನೋವು ನಿವಾರಣೆ ಆಗುವುದು.
ಒಂದು ಟೀ ಚಮಚ ಉಪ್ಪನ್ನು ಒಂದು ಬಟ್ಟಲು ಬಿಸಿ ನೀರಿನಲ್ಲಿ ಕರಗಿಸಿ, ಬಾಯಿ ಮುಕ್ಕಳಿಸುವುದರಿಂದ ಹಲ್ಲುನೋವು ಕಡಿಮೆಯಾಗುವುದು.
ವಸಡಿನಲ್ಲಿ ಊತ ಕಾಣಿಸಿಕೊಂಡಿದ್ದರೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹೆಸರುಕಾಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ತುಪ್ಪದೊಡನೆ ನುಣ್ಣಗೆ ಅರೆದು, ವಸಡುಗಳ ಮೇಲೆ ಲೇಪಿಸಿ, ಸ್ವಲ್ಪ ಮಟ್ಟಿಗೆ ಊತ ಕಡಿಮೆಯಾಗುವುದು ಮತ್ತು ನೋವು ಉಪಶಮನವಾಗುವುದು.
2-3 ಲವಂಗಗಳನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆರಸದೊಡನೆ ಮಿಶ್ರ ಮಾಡಿ, ನೋಯುತ್ತಿರುವ ವಸಡು ಮತ್ತು ಹಲ್ಲುಗಳ ಮೇಲೆ ಇದನ್ನು ನಿಧಾನಕ್ಕೆ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.