ಪ್ರಶಸ್ತಿ ಬರ ಎದುರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಹರಾಜಿನಲ್ಲೂ ಉತ್ತಮ ಆಟಗಾರರನ್ನು ಖರೀದಿಸದೇ ನಿರಾಸೆ ಮೂಡಿಸಿದೆ.
ಅಬುಧಾಬಿಯ ಜೆಡ್ಡಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 83 ಕೋಟಿ ಹೊಂದಿದ್ದ ಆರ್ ಸಿಬಿ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಆಟಗಾರರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೇ, ಉತ್ತಮ ಆಟಗಾರರನ್ನು ಖರೀದಿಸದೇ ನಿರಾಸೆ ಉಂಟು ಮಾಡಿದೆ.
ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ 4 ಆಟಗಾರರನ್ನು ಖರೀದಿಸಿದ್ದ ಆರ್ ಸಿಬಿ ಎರಡನೇ ದಿನ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಫಿಲ್ ಸಾಲ್ಟ್ ಹೊರತುಪಡಿಸಿ ಯಾವುದೇ ಪ್ರಮುಖ ಆಟಗಾರರನ್ನು ಖರೀದಿಸಲಿಲ್ಲ.
ಜೋಶ್ ಹಾಜ್ಲೆವುಡ್ ಅವರನ್ನು ಗರಿಷ್ಠ 12.5 ಕೋಟಿ ರೂ., ಫಿಲ್ ಸಾಲ್ಟ್ ಅವರನ್ನು 11.50 ಕೋಟಿ ರೂ., ಜಿತೇಶ್ ಕುಮಾರ್ ಅವರನ್ನು 11 ಕೋಟಿ ರೂ. ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ.ಗೆ ಆರ್ ಸಿಬಿ ಖರೀದಿಸಿತು.
ಆದರೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಟ್ಟುಕೊಟ್ಟರೆ, ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ 4.5 ಕೋಟಿ ರೂ.ಗೆ ಹಾಗೂ ಮೊಹಮದ್ ಸಿರಾಜ್ ಅವರನ್ನು ಕಡಿಮೆ ಮೊತ್ತಕ್ಕೆ ಆರ್ ಸಿಬಿ ಬಿಟ್ಟುಕೊಟ್ಟಿದ್ದೂ ಅಲ್ಲದೇ ರೈಟ್ ಟು ಮ್ಯಾಚ್ ಕಾರ್ಡ್ ಬಳಸದೇ ನಿರಾಸೆ ಮೂಡಿಸಿತು.
ಕೃನಾಲ್ ಪಾಂಡ್ಯ ಅವರನ್ನು 5.75 ಕೋಟಿ ರೂ. ಖರೀದಿಸಿದ್ದು, ಎಡಗೈ ಬ್ಯಾಟ್ಸ್ ಮನ್ ಮತ್ತು ಸ್ಪಿನ್ನರ್ ಆಗಿರುವ ಕೃನಾಲ್ ಐಪಿಎಲ್ ನಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಎಂಬ ಹಣೆಪಟ್ಟಿ ಹೊತ್ತಿದ್ದು ಆರ್ ಸಿಬಿಗೆ ಬಿಳಿ ಆನೆ ಆಗಲಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ.
ಆರ್ ಸಿಬಿ ಆಟಗಾರರ ಪಟ್ಟಿ (ಕೋಟಿ ರೂ.ಗಳಲ್ಲಿ)
ಲಿಯಾಮ್ ಲಿವಿಂಗ್ ಸ್ಟನ್ (8.75), ಫಿಲ್ ಸಾಲ್ಟ್ (11.50), ಜಿತೇಶ್ ಶರ್ಮ (11), ಜೋಶ್ ಹಾಜ್ಲೆವುಡ್ (12.5), ರಸಿಕ್ ಧರ್ (6), ಸುಯೇಶ್ ಶರ್ಮ (2.6), ಕೃನಾಲ್ ಪಾಂಡ್ಯ (5.75), ಭುವನೇಶ್ವರ್ ಕುಮಾರ್ (10.75), ಸ್ವಪ್ನಿಲ್ ಸಿಂಗ್ (50 ಲಕ್ಷ ರೂ.), ಟಿಮ್ ಡೇವಿಡ್ (3), ರುಮಾರಿಯೊ ಶೆಫಾರ್ಡ್ (1.5), ನುವಾನ್ ತುಷಾರ (1.6)
ತಂಡದಲ್ಲಿ ಉಳಿದುಕೊಂಡಿದ್ದ ಆಟಗಾರರು ವಿರಾಟ್ ಕೊಹ್ಲಿ (21 ಕೋಟಿ), ರಜತ್ ಪಟಿದರ್ (11 ಕೋಟಿ), ಯಶ್ ದಯಾಳ್ (1.6).