ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಹುಬ್ಬಳ್ಳಿಯ ವೀರಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಸೋಮವಾರ ಸಂಜೆ ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದರು.
ನೇಹಾದಂತೆ ಅಂಜಲಿ ಕೊಲೆ ಕೂಡ ಗಂಭೀರ ಪ್ರಕರಣ. ಕೊಲೆಯಾದ ಅಂಜಲಿ ಅಂಬಿಗೇರ ಕುಟುಂಬ ಕಡುಬಡತನದಲ್ಲಿದೆ. ಬೆಂಗಳೂರಲ್ಲಿ ಇದ್ದುಕೊಂಡೇ 2 ಕೊಲೆ ಕೇಸ್ ಮಾಹಿತಿ ಪಡೆಯುತ್ತಿದ್ದೆ. ಮಾನವೀಯತೆ ದೃಷ್ಟಿಯಿಂದ 2 ಕುಟುಂಬಗಳನ್ನು ಭೇಟಿ ಮಾಡಿದ್ದೇನೆ. ಪೊಲೀಸರಿಗೆ ಕೆಲ ಸೂಚನೆ ಕೊಡಬೇಕು, ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಅಂಜಲಿ ತಂಗಿಗೆ ಸಮಾಧಾನ ಹೇಳಿದ ಸಚಿವರು, ಶಿಕ್ಷಣ, ಮನೆ ಹಾಗೂ ನೌಕರಿಯ ಭರವಸೆಯನ್ನು ನೀಡಿದರು. ಇದೇ ವೇಳೆ ಮಹಾನಗರ ಪಾಲಿಕೆ ಸದಸ್ಯ ಪುತ್ರಿ ನೇಹಾ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸುವುದಿಲ್ಲ. ನಮಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ ಎಂದು ಪುನರುಚ್ಚರಿಸಿದರು.