2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೆ ಹೆಚ್ಚು 69 ಲಕ್ಷ ಮತಗಳನ್ನು ಪಡೆದಿದ್ದರೂ 63 ಸ್ಥಾನ ಕಳೆದುಕೊಂಡು ಬಹುಮತ ಪಡೆಯಲು ವಿಫಲವಾಗಿರುವುದು ಹೇಗೆ ಅಂತಿರಾ ಇಲ್ಲಿದೆ ನೋಡಿ ಲೆಕ್ಕಾಚಾರ!
ಹೌದು, ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಬಿಜೆಪಿ ಚುನಾವಣೆಯಲ್ಲಿ ಸೋಲುಂಡರೂ ಮತಗಳ ಲೆಕ್ಕಾಚಾರದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ ಹೆಚ್ಚು ಮತಗಳನ್ನು ಪಡೆದಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2019ರಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಗೆದ್ದಿತ್ತು. ಶೇ.37.3ರಷ್ಟು ಮತಗಳನ್ನು ಪಡೆದಿತ್ತು. 2024ರ ಚುನಾವಣೆಯಲ್ಲಿ ಶೇ,.36.6 ಮತ ಪಡೆದಿದ್ದು, ಶೇ.0.7ರಷ್ಟು ಮತಗಳನ್ನು ಕಳೆದುಕೊಂಡಿದೆ. ವಿಶೇಷ ಅಂದರೆ ಮತದಾನವಾದ ಪ್ರಮಾಣದಲ್ಲಿ ಶೇಕಡವಾರು ಹಂಚಿಕೆ ಲೆಕ್ಕ ಪರಿಗಣಿಸಲಾಗುತ್ತದೆ.
ಶೇಕಡವಾರು ಮತಗಳ ಪ್ರಕಾರ ನೋಡಿದರೆ ಬಿಜೆಪಿ ಮತಗಳ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೆ ಮತಗಳನ್ನು ಲೆಕ್ಕಹಾಕಿದರೆ 2019ರ ಚುನಾವಣೆಯಲ್ಲಿ ಬಿಜೆಪಿ 22.0 ಕೋಟಿ ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ 23.59 ಕೋಟಿ ಮತಗಳನ್ನು ಪಡೆದಿದೆ. ಅಂದರೆ ಹೆಚ್ಚುವರಿ 68.89 ಲಕ್ಷ ಮತಗಳನ್ನು ಪಡೆದಿದೆ.
ಬಿಜೆಪಿ ಸುಮಾರು 70 ಲಕ್ಷ ಮತಗಳನ್ನು ಪಡೆದರೂ 63 ಸ್ಥಾನಗಳನ್ನು ಕಳೆದುಕೊಂಡು ಬಹುಮತ ಪಡೆಯಲು ವಿಫಲವಾಗಿದೆ. ಬಿಜೆಪಿ ಶೇ.0.7ರಷ್ಟು ಮತ ಕಳೆದುಕೊಂಡಿದ್ದರಿಂದ ಶೇ.11ರಷ್ಟು ಸ್ಥಾನಗಳನ್ನು ಹೇಗೆ ಕಳೆದುಕೊಂಡಿತು ಎಂಬುದು ಫಲಿತಾಂಶವೇ ಹೇಳುತ್ತದೆ.