ಭೀಕರ ಮಿಲ್ಟನ್ ಚಂಡಮಾರುತ ಅಮೆರಿಕದ ಫ್ಲೋರಿಡಾದ ಕಡಲ ತೀರಕ್ಕೆ ಅಪ್ಪಳಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 2 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಎರಡು ವಾರಗಳ ಹಿಂದೆ ಅಟ್ಲಾಂಟಿಕಾ ಸಾಗರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಒಂದೇ ಬಾರಿ ಸೃಷ್ಟಿಯಾದ ಮೂರು ಚಂಡಮಾರುತಗಳ ಪೈಕಿ ಒಂದಾದ ಮಿಲ್ಟನ್ ಚಂಡಮಾರುತ ಗುರುವಾರ ಬೆಳಿಗ್ಗೆ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದೆ.
120 ಕಿ.ಮೀ. ವೇಗದಲ್ಲಿ ಚಂಡಮಾರುತ ಚಲಿಸುತ್ತಿದೆ. ಇದರಿಂದ ಭಾರೀ ಪ್ರಮಾಣದ ಹಾನಿ ನಿರೀಕ್ಷಿಸಲಾಗಿದೆ. ಬುಧವಾರ ಇಡೀ ದಿನ ಫ್ಲೋರಿಡಾದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪೆನಿನ್ಸುವಲಾ, ಸರಸೊಟಾ ಮತ್ತು ಮನಥಿ ನಗರಗಳು ಬಹುತೇಕ ಹಾನಿಗೊಳಗಾಗಿದ್ದು, ಕೋಟ್ಯಂತರ ರೂಪಾಯಿ ಅಸ್ತಿ ನಷ್ಟವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಮಿಲ್ಟನ್ ಚಂಡಮಾರುತ ಅತ್ಯಂತ ಭೀಕರವಾಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.