ನಾವು ಭಾರತದ ಜೊತೆ ಹೋಲಿಕೆ ಮಾಡಿಕೊಂಡು ನೋಡೋಣ. ಎರಡೂ ದೇಶಗಳು ಒಂದೇ ದಿನ ಸ್ವಾತಂತ್ರ್ಯಗೊಂಡವು. ಆದರೆ ಭಾರತ ಸೂಪರ್ ಪವರ್ ರಾಷ್ಟ್ರವಾಗಿದ್ದರೆ, ನಾವು ಭಿಕ್ಷುಕರಾಗಿದ್ದೇವೆ ಎಂದು ಪಾಕಿಸ್ತಾನ ಸಚಿವ ಮೌಲಾನಾ ಫಜ್ಲುರ್ ರೆಹಮಾನ್ ಸಂಸತ್ ಅಧಿವೇಶನದಲ್ಲಿ ಹೇಳಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತ ಇಂದು ಸೂಪರ್ ಪವರ್ ರಾಷ್ಟ್ರವಾಗುವ ಕನಸು ಕಾಣುತ್ತಿದೆ. ಆದರೆ ಪಾಕಿಸ್ತಾನ ಸಾಲದ ಸುಳಿಗೆ ಸಿಲುಕಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದೇವೆ. ಇದಕ್ಕೆ ಕಾರಣ ಅಧಿಕಾರ ಹಿಡಿಯಲು ಹೋರಾಟವನ್ನು ಅಭಿವೃದ್ಧಿಗೆ ಬಳಸುತ್ತಿಲ್ಲ ಎಂದರು.
ನಾವು 2018ರ ಚುನಾವಣೆ ಬೇಡ ಎಂದು ಹೇಳಿದೆವು. ಆದರೆ ಕೇಳದೇ ಮತದಾನ ನಡೆಯಿತು. ಇದೀಗ ಮತ್ತೆ ಚುನಾವಣೆ ಬೇಡ ಅಂದರೂ ಮಾಡಿದೆವು. ಇದರಿಂದ ಪಕ್ಷಗಳು ರ್ಯಾಲಿಗಳಿಗೆ ಖರ್ಚು ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಬಳಸುತ್ತಿಲ್ಲ. ಚುನಾವಣೆಗಳಿಗೆ ಅನಗತ್ಯವಾಗಿ ಹಣ ಖರ್ಚಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮದು ಮುಸ್ಲಿಮ್ ರಾಷ್ಟ್ರ ಎಂದು ಘೋಷಿಸಿಕೊಂಡೆವು. ಆದರೆ 1873ರ ನಂತರ ನಮ್ಮದು ಜಾತ್ಯತೀತ ರಾಷ್ಟ್ರವಾಗಿ ಬದಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಒಂದೇ ಒಂದು ನಿರ್ಣಯ ತೆಗೆದುಕೊಳ್ಳಲು ಆಗಿಲ್ಲ. ಹೀಗೆ ಆದರೆ ದೇಶ ಅಭಿವೃದ್ಧಿ ಆಗುವುದು ಯಾವಾಗ ಎಂದು ಪಾಕಿಸ್ತಾನದ ಪ್ರಮುಖ ಇಸ್ಲಾಮಿಕ್ ಸಂಘಟನೆಯಾದ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದಾರೆ.