ಗದಗದ ದಾಸರ ಓಟಿಯಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಮಗನೇ ಕೊಲೆಗೆ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.
ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆ ಆಗಿದ್ದರು. ಕೊಲೆ ನಡೆದಾಗ ಸ್ಥಳದಲ್ಲೇ ಇದ್ದು ಏನೂ ಗೊತ್ತಿಲ್ಲದಂತೆ ಮಗ ವಿನಾಯಕ ಪ್ರಕಾಶ್ ಬಾಕಳೆ ಕೊಲೆಗೆ ಸುಪಾರಿ ನೀಡಿದ್ದ ಎಂಬುದು ವಿಚಾರಣೆ ವೇಳೆಗೆ ಬೆಳಕಿಗೆ ಬಂದಿದೆ.
ಮಗ ವಿನಾಯಕ, ಕುಟುಂಬದವರನ್ನು ಮುಗಿಸಲು ಹಂತಕರಿಗೆ 65 ಲಕ್ಷ ರೂ. ಹಣ ಕೊಡುವುದಾಗಿ ಮಾತಾಡಿದ್ದ. ಅಲ್ಲದೇ ಮುಂಗಡವಾಗಿ 2 ಲಕ್ಷ ರೂ. ಕೊಟ್ಟಿದ್ದ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕಿ, ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಮನೆಗೆ ನುಗ್ಗಿದ್ದ ಹಂತಕರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಹಂತಕರಾದ ವಿನಾಯಕ ಫೈರೋಜ್ ಖಾಜಿ, ಜಿಶಾನ್ ಖಾಜಿ, ಸಾಹಿಲ್ ಖಾಜಿ, ಸೊಹೇಲ್ ಖಾಲಿ, ಸುಲ್ತಾನ್ ಶೇಖ್, ಮಹೇಶ್ ಸಾಳೊಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಮಗ ಸುಪಾರಿ ಕೊಟ್ಟಿರುವುದು ಕೇಳಿ ಶಾಕ್ ಆಗಿದ್ದಾರೆ.
ಆರೋಪಿ ವಿನಾಯಕ ಪ್ರಕಾಶ್ ಬಾಕಳೆ ಮೊದಲ ಹೆಂಡತಿ ಮಗನಾಗಿದ್ದು, ಆಸ್ತಿ ವಿಚಾರದ ವೈಷಮ್ಯದಿಂದ ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್ಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ.
ಹಂತಕರಿಗೆ 2 ಲಕ್ಷ ರೂ. ಮುಂಗಡ ನೀಡಿದ್ದ ವಿನಾಯಕ, ಕೊಲೆ ನಡೆದು ಆಸ್ತಿ ಕೈಗೆ ಸೇರಿದ ನಂತರ ಉಳಿದ ಮೊತ್ತ ನೀಡುವುದಾಗಿ ಹೇಳಿದ್ದ. ಆದರೆ ಆಸ್ತಿ ಕೈ ಸೇರುವ ಮುನ್ನವೇ ಜೈಲು ಪಾಲಾಗಿದ್ದಾನೆ.