ಭಾರತದ ಶೂಟರ್ ಮನು ಭಾಕರ್ ಸತತ ಎರಡನೇ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ 25ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಒಲಿಂಪಿಕ್ಸ್ 2024 ಕ್ರೀಡಾಕೂಟದ 4ನೇ ದಿನವಾದ ಮಂಗಳವಾರ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಭಾರತಕ್ಕೆ ಬಂದ ಎರಡೂ ಪದಕಗಳು ಶೂಟಿಂಗ್ ವಿಭಾಗದ 10 ಮೀ. ಏರ್ ರೈಫಲ್ಸ್ ವಿಭಾಗದಲ್ಲಿ ಬಂದಿದ್ದು ಎರಡೂ ಪದಕಗಳು ಮನು ಭಾಕರ್ ಗೆ ಒಲಿದಿವುದು ವಿಶೇಷ.
ಭಾರತ 12 ವರ್ಷಗಳ ನಂತರ ಶೂಟಿಂಗ್ ನಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ. 2 ಪದಕಗಳ ಸಹಾಯದಿಂದ ಭಾರತ ಪದಕಗಳ ಪಟ್ಟಿಯಲ್ಲಿ 25ನೇ ಸ್ಥಾನಕ್ಕೆ ಜಿಗಿದಿದೆ.
ಪುಟ್ಟ ದ್ವೀಪ ರಾಷ್ಟ್ರ ಜಪಾನ್ 6 ಚಿನ್ನ, 2 ಬೆಳ್ಳಿ ಮತ್ತು 4 ಕಂಚು ಸೇರಿದಂತೆ12 ಪದಕಗಳೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಆತಿಥೇಯ ಫ್ರಾನ್ಸ್ 5 ಚಿನ್ನ, 8 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ 16 ಪದಕಗಳೊಂದಿಗೆ 2ನೇ ಸ್ಥಾನ ಪಡೆದಿದೆ.
ಒಲಿಂಪಿಕ್ಸ್ ನಲ್ಲಿ ಪದಕಗಳ ಪಟ್ಟಿಯಲ್ಲಿ ಯಾವಾಗಲೂ ಪ್ರಾಬಲ್ಯ ಮೆರೆಯುತ್ತಿದ್ದ ಚೀನಾ 5 ಚಿನ್ನ, 5 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ 12 ಪದಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 5 ಚಿನ್ನ, 4 ಬೆಳ್ಳಿ ಒಳಗೊಂಡು 9 ಪದಕದೊಂದಿಗೆ 4 ಹಾಗೂ ದಕ್ಷಿಣ ಕೊರಿಯಾ 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ 5 ಹಾಗೂ ಅಮೆರಿಕ 3 ಚಿನ್ನ, 8 ಬೆಳ್ಳಿ, 9 ಕಂಚು ಸೇರಿದಂತೆ 20 ಪದಕ ಗೆದ್ದರೂ 6ನೇ ಸ್ಥಾನಕ್ಕೆ ಕುಸಿದಿದೆ.