ನಾಟಕೀಯ ತಿರುವುಗಳನ್ನು ಪಡೆದ ಪಂದ್ಯವನ್ನು ಸೂಪರ್ ಓವರ್ ನಲ್ಲಿ ಜಯ ಸಾಧಿಸಿದ ಭಾರತ ತಂಡ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 3-0ಯಿಂದ ವೈಟ್ ವಾಷ್ ಮಾಡಿದೆ. ಈ ಮೂಲಕ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಜೋಡಿಯ ಭಾರತ ತಂಡ ಭರ್ಜರಿಯಾಗಿ ಆರಂಭ ಪಡೆದಿದೆ.
ಪಲ್ಲೆಕೆಲ್ಲೆಯ ಮೈದಾನದಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಗುರಿ ಬೆಂಬತ್ತಿದ ಶ್ರೀಲಂಕಾ 20 ಓವರ ಗಳಲ್ಲಿ 8 ವಿಕೆಟ್ ಗೆ 137 ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡಿತು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಸ್ಪಿನ್ನರ್ ರವಿ ಬಿಶ್ನೋಯಿ ದಾಳಿಗೆ ತತ್ತರಿಸಿ 4 ಎಸೆತಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 1 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಭಾರತ ತಂಡ ಮಹೇಶ್ ತಿಕ್ಷಣ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.
ಶ್ರೀಲಂಕಾ ತಂಡಕ್ಕೆ ಪಾಥುಮ್ ನಿಸ್ಸಾಂಕಾ (26) ಮತ್ತು ಕುಶಾಲ್ ಮೆಂಡಿಸ್ ಮೊದಲ ವಿಕೆಟ್ ಗೆ 58 ರನ್ ಜೊತೆಯಾಟದಿಂದ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಎರಡನೇ ವಿಕೆಟ್ ಗೆ ಕುಶಾಲ್ ಮೆಂಡಿಸ್ ಮತ್ತು ಕುಶಾಲ್ ಪೆರೆರಾ 52 ರನ್ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು.
ಕುಶಾಲ್ ಮೆಂಡಿಸ್ 41 ಎಸೆತಗಳಲ್ಲಿ 3 ಬೌಂಡರಿ ಸಹಿತ 42 ರನ್ ಗಳಿಸಿದರೆ, ಕುಶಾಲ್ ಪೆರೆರಾ 34 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 43 ರನ್ ಗಳಿಸಿದರು. ಕೊನೆಯಲ್ಲಿ ಅರೆಕಾಲಿಕ ಸ್ಪಿನ್ನರ್ ಗಳಾಗಿ ಕಣಕ್ಕಿಳಿದ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ತಲಾ 2 ವಿಕೆಟ್ ಪಡೆದು ಲಂಕನ್ನರನ್ನು ಕಟ್ಟಿ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ 48 ರನ್ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಶುಭಮನ್ ಗಿಲ್ 37 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 39 ರನ್ ಬಾರಿಸಿ ಹೋರಾಟ ನಡೆಸಿದರು. ಕೆಳ ಕ್ರಮಾಂಕದಲ್ಲಿ ರಿಯಾನ್ ಪರಾಗ್ (26) ಮತ್ತು ವಾಷಿಂಗ್ಟನ್ ಸುಂದರ್ (25) ತಂಡದ ಮೊತ್ತವನ್ನು ಸುಧಾರಿಸಿದರೂ ಪ್ರಯೋಜನವಾಗಲಿಲ್ಲ.
ಮಹೇಶ್ ತಿಕ್ಷಣ ಮಾರಕ ದಾಳಿ ನಡೆಸಿ 3 ವಿಕೆಟ್ ಪಡೆದರೆ, ವಹಿಂದು ಅಸರಂಗ 2 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.