2031ರ ವೇಳೆಗೆ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶವಾಗುವ ಅವಕಾಶ ಹೊಂದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಮೈಕಲ್ ಡೆಬಾಬ್ರಾತಾ ಪಾತ್ರ ಹೇಳಿದ್ದಾರೆ.
ಮುಸ್ಸೌರಿಯಲ್ಲಿ ಶನಿವಾರ ನಡೆದ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2060ರ ವೇಳೆಗೆ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕ ದೇಶವಾಗುವ ಸಾಧ್ಯತೆ ಹೊಂದಿದೆ ಎಂದರು.
ಭಾರತ ವಿಶ್ವದ ಎರಡನೇ ಅತಿ ದೊಡ್ಡ ಅರ್ಥಿಕ ದೇಶವಾಗಿ 2048ರ ಬದಲು 2031ರಲ್ಲೇ ಹೊರಹೊಮ್ಮುವ ಕನಸು ಕಾಣಬಹುದು. 2060ರ ವೇಳೆಗೆ ವಿಶ್ವದ ಅತೀ ದೊಡ್ಡ ಅರ್ಥಿಕ ದೇಶವಾಗುವ ಅವಕಾಶ ಹೊಂದಿದ್ದೇವೆ ಎಂದು ಅವರು ಹೇಳಿದರು.
2023-24 ಅವರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ 3.6 ಟ್ರೆಲಿಯನ್ ಡಾಲರ್ ಅಂದರೆ ಸುಮಾರು 295 ಲಕ್ಷ ಕೋಟಿ ರೂ. ಆಗಿದೆ. ದೇಶದ ಪರ್ ಕ್ಯಾಪಿಟಾ ಇನ್ ಕಮ್ 2,07,030 ರೂ. ಆಗಿದೆ ಎಂದು ಅವರು ವಿವರಿಸಿದರು.
ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಬೇಕಾದರೆ ದೇಶದ ಅಭಿವೃದ್ಧಿ ದರ ಮುಂದಿನ 10 ವರ್ಷಗಳ ಕಾಲ ವಾರ್ಷಿಕ 9.6ರಷ್ಟು ಅಭಿವೃದ್ಧಿ ದಾಖಲಿಸಬೇಕು. ಇದು ಸಾಧ್ಯವಾದರೆ ಮಧ್ಯಮ ವರ್ಗದ ಜನರನ್ನೇ ಹೆಚ್ಚಾಗಿ ನಂಬಿರುವ ಭಾರತದಲ್ಲಿ ಅಭಿವೃದ‍್ಧಿ ವೇಗ ಹೆಚ್ಚಲಿದೆ ಎಂದು ಅವರು ಹೇಳಿದರು.