ಭಾರತದ ವಿದ್ಯಾರ್ಥಿಗಳು ಫಿಜಿಕ್ಸ್ ಮತ್ತು ಕೆಮೆಸ್ಟ್ರಿಯಲ್ಲಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಒಟ್ಟಾರೆ 6 ಪದಕಗಳನ್ನು ಗೆಲ್ಲುವ ಮೂಲಕ ಒಲಿಂಪಿಯಡ್ 2024ನಲ್ಲಿ ಗಮನ ಸೆಳೆದಿದ್ದಾರೆ.
ಇರಾನ್ ನ ಇಸ್ಫಾನಾದಲ್ಲಿ ಜುಲೈ 21ರಿಂದ 29ರವರೆಗೆ ಹಾಗೂ ಸೌದಿ ಅರೆಬಿಯಾದ ರಿಯಾದ್ ನಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಫಿಜಿಕ್ಸ್ ಒಲಿಂಪಿಯಡ್ಸ್ ಮತ್ತು 56ನೇ ಅಂತಾರಾಷ್ಟ್ರೀಯ ಕೆಮೆಸ್ಟ್ರಿ ಒಲಿಂಪಿಯಡ್ ನಲ್ಲಿ ಭಾರತದ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡಿದರು.
ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಭಾರತ ಮತ್ತು ವಿಯೆಟ್ನಂ 4ನೇ ಸ್ಥಾನ ಹಂಚಿಕೊಂಡರೆ, ಚೀನಾ ಅಗ್ರಸ್ಥಾನ ಗಳಿಸಿತು. ರಷ್ಯಾ ಮತ್ತು ರೊಮೆನಿಯಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿತು.
ಟೂರ್ನಿಯಲ್ಲಿ 43 ದೇಶಗಳ 193 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಒಟ್ಟು 18 ಚಿನ್ನ, 35 ಬೆಳ್ಳಿ ಮತ್ತು 53 ಕಂಚಿನ ಪದಕಗಳಿಗೆ ಪೈಪೋಟಿ ನಡೆಯಿತು.