ಭಾರತದ ಹಾಕಿ ಪಡೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 8-1 ಗೋಲುಗಳಿಂದ ಸೋಲಿಸಿದೆ. ಈ ಮೂಲಕ ಭಾರತ ಹ್ಯಾಟ್ರಿಕ್ ಗೆಲುವೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.
ಚೀನಾದ ಹುಲುನ್ ಬೇರ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ಗೋಲಿನ ಸರಿಮಳೆ ಸುರಿಸಿ ಅಧಿಕಾರಯುತ ಗೆಲುವು ಸಾಧಿಸಿತು.
ಭಾರತದ ಪರ ರಾಜ್ ಕುಮಾರ್ ಪಾಲ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಹರಿಜೀತ್ ಸಿಂಗ್ ಹುಂಡಲ್ 2, ಜುಗರಾಜ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್ ಮತ್ತು ಉತ್ತಮ್ ಸಿಂಗ್ ತಲಾ 1 ಗೋಲು ಸಿಡಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದ ಭಾರತ ತಂಡ ಭರ್ಜರಿ ಫಾರ್ಮ್ ಮುಂದುವರಿಸಿತು.