ಟಾಟಾ ಮೋಟರ್ಸ್ ನ ಕಾರುಗಳು ದೇಶದ ಅತ್ಯಂತ ಸುರಕ್ಷಿತ ಕಾರುಗಳು ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಕಂಪನಿಯ ಹಲವು ಕಾರುಗಳು ಸುರಕ್ಷಿತ ಮಾನದಂಡದಲ್ಲಿ 5 ಸ್ಟಾರ್ ಗಳನ್ನು ಪಡೆದು ಈ ಗೌರವ ಗಳಿಸಿವೆ.
ಟಾಟಾ ಮೋಟರ್ಸ್ ಕಂಪನಿಯ ಪಂಚ್, ಪಂಚ್.ಇವಿ, ನೆಕ್ಸಾನ್, ನೆಕ್ಸಾನ್.ಇವಿ, ಕರ್ವ್, ಕರ್ವ್.ಇವಿ, ಹರಿಯರ್, ಸಫಾರಿ ಸೇರಿದಂತೆ 7 ಕಾರುಗಳು ಸುರಕ್ಷಿತ ಮಾನದಂಡದಲ್ಲಿ 5 ಸ್ಟಾರ್ ಪಡೆದು ದೇಶದ ಅತ್ಯಂತ ಸುರಕ್ಷಿತ ಕಾರುಗಳ ಸಾಲಿನಲ್ಲಿ ಮಂಚೂಣಿಯಲ್ಲಿದೆ.
ಟಾಟಾ ಮೋಟರ್ಸ್ ನ ಅತ್ಯಂತ ದುಬಾರಿ ಕಾರುಗಳಾದ ಸಫಾರಿ, ಹರಿಯರ್ ಮತ್ತು ಕರ್ವ್ ಕಾರುಗಳು ಎಓಪಿ ಮತ್ತು ಸಿಓಪಿ ಬ್ರೇಕ್ ಗಳು ಅತ್ಯಂತ ಗುಣಮಟ್ಟದ್ದಾಗಿದೆ ಎಂದು ವರದಿ ಹೇಳಿದೆ.
ಟಾಟಾದ ಎಲೆಕ್ಟ್ರಿಕ್ ವಾಹನಗಳಾದ ಎಸ್ ಯುವಿ, ಪಂಚ್.ಇವಿ ಕಾರುಗಳು 6 ರೇಟಿಂಗ್ ಅಂಕಗಳನ್ನು ಪಡೆದು ಅತ್ಯಂತ ಸುರಕ್ಷಿತ ಕಾರುಗಳು ಎನಿಸಿಕೊಂಡಿವೆ.
ಪಂಚ್.ಇವಿ ಕಾರು 34 ಅಂಕಗಳ ಪೈಕಿ 31.46 ಅಂಕ ಪಡೆದಿವೆ. ಎಓಪಿ ವಿಭಾಗದಲ್ಲಿ 49 ಅಂಕಗಳ ಪೈಕಿ 45 ಅಂಕ ಗಳಿಸಿವೆ.