ದೇಶದ ಹಣದುಬ್ಬರ ನಿಯಂತ್ರಣದಲ್ಲಿದ್ದು, ಆರ್ಥಿಕತೆ ಬಲಿಷ್ಠವಾಗಿದೆ. 2024-2025ನೇ ಸಾಲಿನಲ್ಲಿ ಶೇ.6.5ರಿಂದ 7ರಷ್ಟು ಪ್ರಗತಿ ನಿರೀಕ್ಷಿಸಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಆರಂಭಗೊಂಡ ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ಆರ್ಥಿಕ ಸಮೀಕ್ಷೆ ವರದಿಯನ್ನು ಅವರು ಮಂಡಿಸಿದರು.
ಮಂಗಳವಾರ ದಾಖಲೆಯ 7ನೇ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತರಾಮನ್, ಕೋವಿಡ್ ನಂತರ ಉಂಟಾದ ಆರ್ಥಿಕ ಹಿಂಜರಿತ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದ್ದು, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿದೆ ಎಂದು ಹೇಳಿದರು.
2024ನೇ ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ಧಿ ಪ್ರಮಾಣ ಶೇ.8ರಷ್ಟು ದಾಖಿಸುವ ವಿಶ್ವಾಸವಿದೆ. 2025ನೇ ಆರ್ಥಿಕ ವರ್ಷದಲ್ಲಿ ಇದು ಶೆ.6.5ರಿಂದ 7ರವರೆಗೆ ತಲುಪಬಹುದು ಎಂದು ಅವರು ವಿವರಿಸಿದರು.