ರಷ್ಯಾದ ಜೊತೆ ತೈಲ ಆಮದು ಮುಂದುವರಿಸಿದರೆ ಭಾರತ ಮತ್ತು ಚೀನಾದ ಆರ್ಥಿಕತೆಯನ್ನು ಧ್ವಂಸಗೊಳಿಸಲಾಗುವುದು ಎಂದು ಅಮೆರಿಕ ಸೆನೆಟರ್ ಲಿಂಡ್ಸೆ ಗ್ರಾಹಂ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ನಿಲ್ಲಿಸದ ರಷ್ಯಾ ಜೊತೆ ತೈಲ ಆಮದು ಸೇರಿದಂತೆ ವ್ಯಾಪಾರ- ವಹಿವಾಟು ಮುಂದುವರಿಸುತ್ತಿರುವ ಭಾರತ, ಚೀನಾ ಸೇರಿದಂತೆ ರಷ್ಯಾದ ಜೊತೆ ವ್ಯಾಪಾರ-ವಹಿವಾಟು ಮುಂದುವರಿಸಿರುವ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ತೆರಿಗೆ ವಿಧಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಿಪಬ್ಲಿಕ್ ಪ್ರತಿನಿಧಿ ಆಗಿರುವ ಲಿಂಡ್ಸೆ ಗ್ರಾಹಂ, ರಷ್ಯಾ ಜೊತೆ ವ್ಯವಹಾರ ಮುಂದುವರಿಸಿರುವ ದೇಶಗಳ ಮೇಲೆ ಅಮೆರಿಕ ಶೇ.100ರಷ್ಟು ತೆರಿಗೆ ವಿಧಿಸಲಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಲಿಂಡ್ಸೆ ಶೇ.500ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಮಾಡಿದ್ದರು.
ಅಮೆರಿಕದ ಎಚ್ಚರಿಕೆ ನಡುವೆಯೂ ಭಾರತ, ಚೀನಾ ಮತ್ತು ಬ್ರೆಜಿಲ್ ಮುಂತಾದ ದೇಶಗಳು ಯುದ್ಧ ನಿಲ್ಲಿಸದ ದೇಶಗಳ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಶಕ್ತಿ ಅಮೆರಿಕಕ್ಕೆ ಇದೆ. ನಾವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಈ ದೇಶಗಳು ಪರದಾಡುವಂತೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ರಷ್ಯಾದಿಂದ ಶೇ.80ರಷ್ಟು ತೈಲವನ್ನು ಈ ಮೂರು ರಾಷ್ಟ್ರಗಳು ಖರೀದಿ ಮಾಡುತ್ತಿವೆ. ಇದರಿಂದ ರಷ್ಯಾ ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ಅಲ್ಲದೇ ಯುದ್ಧಕ್ಕೆ ಪರೋಕ್ಷ ಸಹಾಯ ಮಾಡುತ್ತಿವೆ ಎಂದು ಅವರು ಆರೋಪಿಸಿದರು.


