Thursday, December 25, 2025
Google search engine
Homeವಿದೇಶ8 ಬಾಂಬ್ ಹಾಕಿದ ಪಾಕಿಸ್ತಾನ: ಖೈಬರ್ ಪಖ್ತುಂಖ್ವಾದಲ್ಲಿ 30 ಸಾವು

8 ಬಾಂಬ್ ಹಾಕಿದ ಪಾಕಿಸ್ತಾನ: ಖೈಬರ್ ಪಖ್ತುಂಖ್ವಾದಲ್ಲಿ 30 ಸಾವು

ಖೈಬರ್ ಪಖ್ತುಂಖ್ವಾ ಪ್ರದೇಶದ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿ 8 ಬಾಂಬ್ ಎಸೆದ ಪರಿಣಾಮ 30 ಮಂದಿ ಅಸುನೀಗಿದ್ದಾರೆ.

ತಿರಾಹ್ ಕಣಿವೆಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರದೇಶದ ಗ್ರಾಮದ ಮೇಲೆ ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ. ಪಾಕಿಸ್ತಾನದ ವಾಯುಪಡೆ ಯುದ್ಧ ವಿಮಾನಗಳು 8 ಎಲ್ ಎಸ್-6 ಬಾಂಬ್ ಗಳನ್ನು ಹಾಕಿದೆ.

ಬಾಂಬ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ನಾಗರಿಕರು ಎಂದು ಹೇಳಲಾಗಿದೆ.

ಉಗ್ರರ ಚಟುವಟಿಕೆಗಳನ್ನು ಹತ್ತಿಕ್ಕಲು ಈ ಪ್ರದೇಶದಲ್ಲಿ ಪಾಕಿಸ್ಥಾನ ನಡೆಸಿದ ಇತ್ತೀಚಿನದ ದಾಳಿಯಲ್ಲಿ ಅತೀ ದೊಡ್ಡದು ಎಂದು ಹೇಳಲಾಗಿದ್ದು, ನಾಗರಿಕರು ಮೃತಪಟ್ಟ ಭೀಕರ ದೃಶ್ಯಗಳು ವೈರಲ್ ಆಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments