ದ್ವೀಪರಾಷ್ಟ್ರ ಜಪಾನ್ ನಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಿದ ಮಾರನೇ ದಿನವಾದ ಬುಧವಾರ ಮತ್ತೆ 6.5ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.
ಹೊಕೈಡೊದಲ್ಲಿ 57 ಕಿ..ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಇದೇ ಜಾಗದಲ್ಲಿ 48 ಗಂಟೆಗಳ ಹಿಂದೆ ಪ್ರಬಲ ಭೂಕಂಪನ ಸಂಭವಿಸಿತ್ತು.
ಭೂಕಂಪನದ ತೀವ್ರತೆಗೆ 3 ಅಡಿಗಿಂತಲೂ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಮತ್ತಷ್ಟು ಪ್ರಮಾಣದಲ್ಲೀ ಭೂಕಂಪನ ಹಾಗೂ ಸುನಾಮಿ ಅಲೆಗಳ ಭೀತಿ ಇದೆ ಎಂದು ಭೂವಿಜ್ಞಾನ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.


