ಜಪಾನ್ ಕಡಲ ತೀರದಲ್ಲಿ ಪ್ರಬಲ 7.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, 3 ಅಡಿಗಿಂತ ಹೆಚ್ಚು ಎತ್ತರದ ಅಲೆಗಳು ಕಾಣಿಸಿಕೊಂಡಿದ್ದರಿಂದ ಜನರು ಬೆಚ್ಚಿಬಿದ್ದಿದ್ದಾರೆ.
ಜಪಾನ್ ವಾಯುವ್ಯ ಭಾಗದ ಕಡಲ ತೀರದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 11.30ಕ್ಕೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಹೊಕೈಡೊ, ಅಮೊರಿಯೊ ಮತ್ತು ಇವಾಟೆ ನಗರಗಳು ಪರಿಣಾಮ ಎದುರಿಸಿವೆ.
ಭೂಕಂಪನದ ಅನುಭವಗಳ ವೀಡಿಯೊಗಳನ್ನು ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ 6.0 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಇದು ಎರಡನೇಯದ್ದಾಗಿದೆ. ಆದರೆ ಈ ಬಾರಿಯ ಹೆಚ್ಚಿನ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


