108 ದೇಶಗಳಲ್ಲಿ 29 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಭಾರತೀಯ ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಸುಮಾರು 30,161 ತೆರಿಗೆ ಪಾವತಿದಾರರು ವಿದೇಶಗಳಲ್ಲಿ ಆಸ್ತಿ ಘೋಷಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ 29 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕ್ ಖಾತೆ, ಷೇರು ಮಾರುಕಟ್ಟೆಯ ಡಿವಿಡೆಂಡ್ ವಿವರ, ಠೇವಣಿಯಿಂದ ಬರುವ ಬಡ್ಡಿ ಸೇರಿದಂತೆ ವಿವಿಧ ಆದಾಯ ಮೂಲಗಳ ಮಾಹಿತಿ ಸಂಗ್ರಹಿಸಿದೆ.
2021-22ರ ಅವಧಿಯಲ್ಲಿ ವಿದೇಶದಲ್ಲಿ 2,31,452 ತೆರಿಗೆ ಪಾವತಿದಾರರು 60 ಸಾವಿರ ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದರು. ಇದೀಗ ಭಾರತದಲ್ಲೇ ಹೆಚ್ಚು ಆಸ್ತಿ ಹೊಂದುವ ಜಾಗೃತಿಯಿಂದ ವಿದೇಶದಲ್ಲಿ ಆಸ್ತಿ ಖರೀದಿ ಪ್ರಮಾಣದಲ್ಲಿ ಕುಸಿತ ಆಗಿದೆ ಎಂದು ಹೇಳಲಾಗಿದೆ.
125 ದೇಶಗಳು ಭಾರತೀಯರು ತಮ್ಮ ದೇಶದಲ್ಲಿ ಹೊಂದಿರುವ ಆಸ್ತಿ, ವಹಿವಾಟು ಕುರಿತು ಮಾಹಿತಿ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿವೆ ಎಂದು ಹೇಳಲಾಗಿದೆ.


