ಆಡಳಿತಾರೂಢ ಲಿಬರಲ್ ಡೊಮೆಸ್ಟಿಕ್ ಪಕ್ಷ ಇಬ್ಭಾಗ ಆಗುವುದನ್ನು ತಡೆಗಟ್ಟಲು ಜಪಾನ್ ಪ್ರಧಾನಿ ಸ್ಥಾನಕ್ಕೆ ಶಿಗೆರು ಇಶಿಬಾ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಸಂಜೆ 6 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಎಂದು ಜಪಾನ್ ಮಾಧ್ಯಮಗಳು ಭಾನುವಾರ ಈ ಬಗ್ಗೆ ವರದಿ ಮಾಡಿವೆ.
ಪಕ್ಷದ ನಾಯಕತ್ವದ ಬದಲಾವಣೆ ಆಗಬೇಕೋ ಅಥವಾ ಪ್ರಧಾನಿ ವಿರುದ್ಧ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕೋ ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದ ಹಿನ್ನೆಲೆಯಲ್ಲಿ ಶಿಗೆರು ಇಶಿಬಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಜುಲೈನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಲಿಬರಲ್ ಡೊಮೆಸ್ಟಿಕ್ ಪಕ್ಷಕ್ಕೆ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ಶಿಗೆರು ಇಶಿಬಾ ನೈತಿಕ ಹೊಣೆ ಹೊತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷದ ಹಲವು ಮುಖಂಡರು ದೂರವಾಣಿ ಕರೆ ಮಾಡಿ ಒತ್ತಡ ಹೇರಿದ್ದರು. ಅಲ್ಲದೇ ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


