ಮೊದಲ ಬಾರಿ ಸಮುದ್ರದ ಮೇಲೆ ಡ್ರೋಣ್ ದಾಳಿ ನಡೆಸಿದ ರಷ್ಯಾ, ಉಕ್ರೇನ್ ನ ಅತೀ ದೊಡ್ಡ ನೌಕಾಪಡೆಯನ್ನು ಹೊಡೆದುರುಳಿಸಿದೆ.
ರಷ್ಯಾ ರಕ್ಷಣಾ ಪಡೆಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಉಕ್ರೇನ್ ನ ನೌಕಾಪಡೆಯಲ್ಲಿ ಹಲವು ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಅತೀ ದೊಡ್ಡ ನೌಕೆಯನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದೆ.
ರಾಡರ್, ರೇಡಿಯೊ, ಎಲೆಕ್ಟ್ರಾನಿಕ್ ಮತ್ತು ಪುನರ್ ಸಂಘಟನೆ ಸಾಮರ್ಥ್ಯದ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದ್ದ ಲಗುನಾ ಹೆಸರಿನ ನೌಕೆಯನ್ನು ಒಡೆಸ್ಸಾ ವಲಯದ ದಾನುಬೆ ನದಿ ಸಮೀಪ ದಾಳಿ ಮಾಡಿ ಮುಳುಗಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.
ರಷ್ಯಾ ಇದೇ ಮೊದಲ ಬಾರಿ ಜಲ ದಾಳಿ ನಡೆಸಿದ್ದು, ಅತ್ಯಂತ ಯಶಸ್ವಿಯಾಗಿ ದಾಳಿ ನಡೆಸಲಾಗಿದೆ. ಇದು ನಮ್ಮ ಜಲಮಾರ್ಗದ ಶಕ್ತಿಯನ್ನು ತೋರಿಸುತ್ತದೆ ಎಂದು ರಷ್ಯಾ ರಕ್ಷಣಾ ಪಡೆ ಹೇಳಿಕೊಂಡಿದೆ.
ನೌಕೆಯಲ್ಲಿದ್ದ ಹಲವು ಸಿಬ್ಬಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ರಕ್ಷಣಾ ಕಾರ್ಯ ನಡೆದಿದ್ದು, ಅಧಿಕೃತವಾಗಿ ಸಾವು-ನೋವಿನ ವರದಿ ಬೆಳಕಿಗೆ ಬಂದಿಲ್ಲ.


