ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಿಯ ಮೌಲ್ಯ 2024ರ ಆವೃತ್ತಿಯ ನಂತರ ಭಾರೀ ಜಿಗಿತ ಕಂಡಿದ್ದರೆ, ಮೌಲ್ಯಯುತ ತಂಡದ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಕುಸಿತ ಕಂಡಿದೆ.
ಐಪಿಎಲ್ ಟಿ-20 ಟೂರ್ನಿಯ ಮೌಲ್ಯ ಪ್ರಸಕ್ತ ಸಾಲಿನಲ್ಲಿ ಶೇ.6.5ರಷ್ಟು ಜಿಗಿತ ಕಂಡಿದ್ದು, ಒಟ್ಟಾರೆ ಮೌಲ್ಯ 1,35,000 ಕೋಟಿ ರೂ.ಗೆ ಏರಿಕೆಯಾಗಿದೆ.
ಹೌಲಿಯಾನ್ ಲೋಕಿ ಎಂಬ ಸಂಸ್ಥೆ ಐಪಿಎಲ್ ಟೂರ್ನಿ ಹಾಗೂ ತಂಡಗಳ ಮೌಲ್ಯಮಾಪನ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ ಶೇ.63ರಿಂದ ಶೇ.6.5ರಷ್ಟು ಮೌಲ್ಯದಲ್ಲಿ ಹೆಚ್ಚಳವಾಗಿದೆ ಎಂದು ವರದಿ ನೀಡಿದೆ.
ಐಪಿಎಲ್ ಮೌಲ್ಯಯುತ ತಂಡಗಳ ಪಟ್ಟಿಯಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು 2024ರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಸ್ಥಾನ ಪಡೆದಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಮೌಲ್ಯಯುತ ತಂಡವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಪ್ರವೇಶಿಸಲು ವಿಫಲವಾದರೂ ತಂಡದ ಮೌಲ್ಯದಲ್ಲಿ ಶೇ.9ರಷ್ಟು ಏರಿಕೆಯಾಗಿದ್ದು, 231 ದಶಲಕ್ಷ ಡಾಲರ್ ಗೆ ಏರಿಕೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೌಲ್ಯ 227 ದಶಲಕ್ಷ ಡಾಲರ್ ನೊಂದಿಗೆ ಎರಡನೇ ಸ್ಥಾನ ಪಡೆದಿದೆ. ಚಾಂಪಿಯನ್ ಪಟ್ಟ ಅಲಂಕರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೌಲ್ಯದಲ್ಲಿ ಭಾರೀ ಏರಿಕೆಯಾಗಿದ್ದು, ಶೇ.19.30ರಷ್ಟು ಅಂದರೆ 216 ದಶಲಕ್ಷ ಡಾಲರ್ ಗೆ ಜಿಗಿತ ಕಂಡಿದೆ.
ಐಪಿಎಲ್ ಪ್ರಾಯೋಜಕತ್ವ ಟಾಟಾ ಗ್ರೂಪ್ಸ್ 2024ರಿಂದ 2028ರವರೆಗೆ 2500 ಕೋಟಿ ರೂ.ಗೆ ಪಡೆದಿದೆ. ಅಂದರೆ ಪ್ರತೀ ಆವೃತ್ತಿಯಲ್ಲಿ 335 ಕೋಟಿ ರೂ. ನೀಡಲಿದೆ.