ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಹ್ ಮತ್ತು ಆತನ ಅಂಗರಕ್ಷಕ ಹತ್ಯೆಯಾಗಿದ್ದಾರೆ ಎಂದು ಪ್ಯಾಲೆಸ್ತೀನ್ ಘೋಷಿಸಿದೆ.
ಮಂಗಳವಾರ ಬೆಳಿಗ್ಗೆ ಆರಂಭಿಸಿದ ಕಾರ್ಯಾಚರಣೆ ರಾತ್ರಿ ವೇಳೆ ಅಂತ್ಯಗೊಂಡಿದ್ದು, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಅವರನ್ನು ಹತ್ಯೆ ಮಾಡಲಾಗಿದೆ.ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪ್ಯಾಲೆಸ್ತೀನ್ ಹೇಳಿದೆ.
ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಇತ್ತೀಚೆಗಷ್ಟೇ ನಡೆದ ಅಧ್ಯಕ್ಷ ಮಸೂದ್ ಪೆಜೆಶೆಕಿನ್ ಅಧಿಕಾರ ಸ್ವೀಕಾರ ಸಮಾರಂಭ ನಡೆದಿದ್ದು, ಈ ಸಮಾರಂಭದಲ್ಲಿ ಇಸ್ಮಾಯಿಲ್ ಭಾಗಿಯಾಗಿ ಇಲ್ಲೇ ತಂಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಜಾಹಿದ್ದೀನ್ ಮುಖಂಡ ಇಸ್ಮಾಯಿಲ್ ಅವರನ್ನು ಹತ್ಯೆ ಮಾಡಲಾಗಿದೆ. ಈತ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಭಾಗಿಯಾಗಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇರಾನ್ ಬಂಡುಕೋರ ಸಂಘಟನೆ ಕೂಡ ಈ ವಿಷಯವನ್ನು ದೃಢಪಡಿಸಿದೆ.