ಹಮಾಸ್ ಉಗ್ರರ ವಶದಲ್ಲಿದ್ದ ನಾಲ್ವರು ಇಸ್ರೇಲಿ ಪ್ರಜೆಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು ಸುರಕ್ಷಿತವಾಗಿ ರಕ್ಷಿಸಿದೆ.
ನೋವಾ ಅರಗಾಮಿ (25), ಅಲ್ಮೋಗ್ ಮೀರ್ ಜಾನ್ (21), ಆಂಡ್ರೆ ಕ್ಲೊಸೊಲೊವ್ (27) ಮತ್ತು ಶ್ಲೋಮಿ ಜಿವ್ (40) ಅವರನ್ನು ರಕ್ಷಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆ ಬಿಡುಗಡೆ ಮಾಡಿದೆ.
ಅಕ್ಟೋಬರ್ 7, 2023ರಲ್ಲಿ ದಾಳಿ ನಡೆಸಿದ್ದ ಹಮಾಸ್ ಉಗ್ರರು ಸಂಗೀತ ಉತ್ಸವದಲ್ಲಿ ಭಾಗಿಯಾಗಿದ್ದ ಹಲವರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು.
ವಿವಿಧ ಹಂತಗಳ ಕಾರ್ಯಾಚರಣೆ ಮೂಲಕ ನಾಲ್ವರನ್ನು ರಕ್ಷಿಸಲಾಗಿದ್ದು, ಬಿಡುಗಡೆ ಆದ ನಾಲ್ವರ ಆರೋಗ್ಯ ಉತ್ತಮವಾಗಿದ್ದು, ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.