ಲೆಬೆನಾನ್ ನ ಬೈರುತ್ ಕೇಂದ್ರೀಕರಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೆಜಾಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಮೃತಪಟ್ಟಿದ್ದಾರೆ.
ಶುಕ್ರವಾರ ನಿರ್ದಿಷ್ಟ ಗುರಿಯ ಮೇಲೆ ನಿಖರ ದಾಳಿ ನಡೆಸಿ ಕಮಾಂಡರ್ ಇಬ್ರಾಹಿಂ ಅಕಿಲ್ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಟ್ಟಾರೆ 3 ಮಂದಿ ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪೇಜರ್ ಮತ್ತು ವಾಕಿಟಾಕಿ ಸ್ಫೋಟ ಬೆನ್ನಲ್ಲೇ ಹೆಜಾಬುಲ್ಲಾ ಪ್ರತಿದಾಳಿ ನಡೆಸಿದ್ದರೂ ಇಸ್ರೇಲ್ ರಕ್ಷಣಾ ಪಡೆಗಳು ವಿಫಲಗೊಳಿಸಿವೆ. ಲೆಬೆನಾನ್ ಮತ್ತು ಇಸ್ರೇಲ್ ನಡುವೆ ಭಾರೀ ಪ್ರಮಾಣದಲ್ಲಿ ದಾಳಿ-ಪ್ರತಿದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇಸ್ರೇಲ್ ಮೇಲೆ ದಾಳಿಗೆ ಸಜ್ಜಾಗಿದ್ದ 100ಕ್ಕೂ ಹೆಚ್ಚು ರಾಕೆಟ್ ಲಾಂಚರ್ ಗಳನ್ನು ಉಡಾಯಿಸಲಾಗಿದ್ದು, 1000ಕ್ಕೂ ಹೆಚ್ಚಿ ರಾಕೆಟ್ ಗಳನ್ನು ಧ್ವಂಸ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ.
ಪೇಜರ್ ಮತ್ತು ವಾಕಿ-ಟಾಕಿ ದಾಳಿಗಳ ನಂತರ ಹೆಜಾಬುಲ್ಲಾ ಮುಖ್ಯಸ್ಥ ಇಸ್ರೇಲ್ ಗೆ ತಕ್ಕ ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ಪ್ರತಿದಾಳಿ ನಡೆದಿದೆ.
ಇದೇ ವೇಳೆ ಲೆಬೆನಾನ್ ನಿಂದ ಹೊರಡುವ ವಿಮಾನಗಳಲ್ಲಿ ವಾಕಿಟಾಕಿ, ಪೇಜರ್ ಗಳ ಬಳಕೆ ನಿಷೇಧಿಸಿ ಹೆಜಾಬುಲ್ಲಾ ಆದೇಶ ಹೊರಡಿಸಿದೆ.