ಇರಾನ್ ಮೇಲೆ ಯುದ್ಧ ಸಾರಲು ಇಸ್ರೇಲ್ ಸೇನಾ ಸಿದ್ಧತೆ ಆರಂಭಿಸಿದ್ದು, ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕದ ಅತ್ಯಂತ ರಹಸ್ಯ ದಾಖಲೆ ಸೋರಿಕೆಯಾಗಿದೆ.
ಅಮೆರಿಕದ ಅತ್ಯಂತ ಬಲಿಷ್ಠ ಗುಪ್ತಚರ ಸಂಸ್ಥೆಯಾದ ನ್ಯಾಷನಲ್ ಜಿಯೊಸ್ಪೆಟಲ್ ಇಂಟಲಿಜೆನ್ಸ್ ಏಜೆನ್ಸಿ (ಎನ್ ಜಿಎ) ನಮಗೆ ಅಮೆರಿಕದ ಗುಪ್ತಚರ ಸ್ಯಾಟಲೈಟ್ ಗಳು ಸಂಗ್ರಹಿಸಿದ ಛಾಯಾಚಿತ್ರಗಳ ವಿಮರ್ಶೆ ಮಾಡಲಾಗುತ್ತಿದ್ದು, ಇಸ್ರೇಲ್ ಸೇನಾ ತರಬೇತಿ ಆರಂಭಿಸಿದ್ದು, ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ತಿಳಿಸಿದೆ.
ಅಕ್ಟೋಬರ್ 15 ಮತ್ತು 16ರಂದು ಎರಡು ಪ್ರಮುಖ ದಾಖಲೆಗಳನ್ನು ಟೆಲಿಗ್ರಾಂ ಅಕೌಂಟ್ ಮೂಲಕ ದಾಖಲೆಗಳ ಹಂಚಿಕೆ ನಡೆಯುತ್ತಿದೆ. ಇದು ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ನಡೆಸುತ್ತಿರುವ ಸೇನಾ ಸಿದ್ಧತೆ ಎಂದು ಹೇಳಲಾಗಿದೆ.
ಇಸ್ರೇಲ್ ವಾಯುಪಡೆ ಇರಾನ್ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿವೆ. ಆಕಾಶದಿಂದ ಆಕಾಶದ ಮೇಲೆ ಹಾಗೂ ಆಕಾಶದಿಂದ ನೆಲದ ಮೇಲೆ ದಾಳಿ ಸೇರಿದಂತೆ ಹಲವು ಪ್ರಯತ್ನಗಳು ನಡೆಯಲಿವೆ. ಸಾಕಷ್ಟು ಸೇನಾ ಬಲ ಹೊಂದಿರುವ ಇರಾನ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ದಾಖಲೆಗಳನ್ನು ಆಧರಿಸಿ ಅಮೆರಿಕ ಗುಪ್ತಚರ ಸಂಸ್ಥೆಯ ದಾಖಲೆ ಸೋರಿಕೆಯಾಗಿದೆ.
ಗುಪ್ತಚರ ಸಂಸ್ಥೆಯ ಮಾಹಿತಿ ಸೋರಿಕೆಗೆ ಬಗ್ಗೆ ಅಮೆರಿಕ ಮಿಶ್ರ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಅಮೆರಿಕದ ಗೌಪ್ಯ ಮಾಹಿತಿಗಳು ಸೋರಿಕೆ ಆಗುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಇಸ್ರೇಲ್ ದಾಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅಮೆರಿಕದ ಶೀಘ್ರದಲ್ಲೇ ನೇರವಾಗಿ ಬೆಂಬಲ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.