ಈ ಶತಮಾನದ ಅಂತ್ಯದ ವೇಳೆಗೆ ಮುಂದಿನ 100 ವರ್ಷದೊಳಗೆ ಕುಡಿಯಲು ಆಗದಷ್ಟು ಅಂತರ್ಜಲದ ನೀರು ಬಿಸಿಯಾಗಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಜಗತ್ತಿನಾದ್ಯಂತ ಮೊದಲ ಬಾರಿ ಅಂತರ್ಜಲ ನೀರಿನ ಬಿಸಿ ಕುರಿತು ನಡೆದ ಸಮೀಕ್ಷೆಯಲ್ಲಿ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಹವಾಮಾನ ವೈಪರಿತ್ಯದಿಂದ ಅಂತರ್ಜಲದ ನೀರಿನ ಉಷ್ಣಾಂಶ 2.5 ಡಿಗ್ರಿ ಸೆಲ್ಸಿಯಸ್ ನಿಂದ 3.1 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಲಿದೆ ಎಂದು ಹೇಳಿದೆ.
ನ್ಯೂಸ್ ಕ್ಯಾಸ್ಟಲ್ ವಿಶ್ವವಿದ್ಯಾಲಯದ ಡಾ. ಗ್ಯಾಬ್ರಿಯೆಲ್ ರಾಜು, ಚಾರ್ಲಿಸ್ ಡ್ರಾವಿನ್ ವಿಶ್ವವಿದ್ಯಾಲಯದ ಡಾ.ಡೈಲಿನ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ದಿನೇದಿನೇ ಅಂತರ್ಜಲ ಉಷ್ಣಾಂಶ ಹೆಚ್ಚಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮೀಕ್ಷೆ ವೇಳೆ ನೀರಿನ ಗುಣಮಟ್ಟ, ಆರೋಗ್ಯದ ಮೇಲೆ ಪರಿಣಾಮ ಮತ್ತು ಮನುಷ್ಯರ ದೇಹಕ್ಕೆ ಹೊಂದಿಕೊಳ್ಳುವ ಗುಣಗಳ ಕುರಿತು ಸಮೀಕ್ಷೆ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಅಂತರ್ಜಲ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಲಿದೆ. ಇದರಿಂದ ಆರಂಭಿಕ ಹಂತದಲ್ಲಿ ನದಿ ಅಥವಾ ಕೆರೆ, ಸರೋವರಗಳಲ್ಲಿ ಮೀನುಗಳ ಸಾವು ಕಂಡು ಬರುತ್ತದೆ. 2099ರ ವೇಳೆಗೆ ಜಗತ್ತಿನ ಹಲವೆಡೆ ಕುಡಿಯಲು ಆಗದಷ್ಟು ನೀರು ಬಿಸಿಯಾಗಲಿದೆ.
ಜಗತ್ತಿನ 600 ಕೋಟಿ ಜನರು ಕುಡಿಯುವ ನೀರನ್ನು ಅವಲಂಬಿಸಿದ್ದಾರೆ. ಹವಾಮಾನದಲ್ಲಿ ಬಿಸಿಯ ಪ್ರಮಾಣ ಹೆಚ್ಚಾಗುವುದರಿಂದ ಇದು ನೀರಿನ ಮೇಲೂ ಪರಿಣಾಮ ಬೀರಲಿದ್ದು, ನೀರಿನಲ್ಲಿ ವಿಷ ಸೇರಲಿದೆ. ಈಗಾಗಲೇ ಜಗತ್ತಿನ ಹಲವು ಕಡೆ ಕುಡಿಯುವ ನೀರಿನ ಪ್ರಮಾಣ ಸೀಮಿತಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.
ನೀರಿನ ಮೂಲಗಳ ಸುರಕ್ಷತೆ ಮತ್ತು ವಾತಾವರಣೆ ಸಂಪಾಗಿರಲು ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ನೀರು ಸಿಕ್ಕರೂ ಕುಡಿಯಲು ಆಗದಷ್ಟು ಬಿಸಿಯಾಗಿ ಇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.