ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದ ನಟಿ ಯಮುನಾ ಶ್ರೀನಿಧಿ ಮೊದಲ ವಾರವೇ ಹೊರಬಿದ್ದಿದ್ದಾರೆ. ಬಿಗ್ ಶೋ ಬಂಡವಾಳ ಹೊರಗೆ ಹಾಕ್ತೀನಿ ಎಂದು ಧಮ್ಕಿ ಹಾಕಿದ್ದ ವಕೀಲ ಜಗದೀಶ್ ನರಕಕ್ಕೆ ಸ್ಥಳಾಂತರಗೊಂಡಿದ್ದಾರೆ.
ಕಿಚ್ಚ ಸುದೀಪ್ ನಡೆಸಿಕೊಡುವ ವೀಕೆಂಡ್ ನಲ್ಲಿ ನಡೆದ ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಅತೀ ಕಡಿಮೆ ಮತ ಪಡೆದ ಹಿರಿಯ ನಟಿ ಯಮುನಾ ಶ್ರೀನಿಧಿ ಮೊದಲ ವಾರವೇ ನಿರ್ಗಮಿಸಿದ್ದಾರೆ. ವಿಶೇಷ ಅಂದರೆ ಬಿಗ್ ಬಾಸ್ 11ರ ಮನೆಗೆ ಮೊದಲ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಯಮುನಾ ಸ್ವರ್ಗದ ಮನೆಗೆ ಪ್ರವೇಶಿಸಿದ್ದರು.
ವಾರದ ಕಳಪೆ ಸಾಧನೆಗಾಗಿ 5 ಸ್ಪರ್ಧಿಗಳಿಂದ ಮತ ಪಡೆದಿದ್ದ ಹಾಗೂ ಮೊದಲ ವಾರವೇ ಗದ್ಧಲ ಸೃಷ್ಟಿಸಿದ್ದ ವಕೀಲ ಜಗದೀಶ್ ನರಕದ ಮನೆಗೆ ಹೋಗಿದ್ದಾರೆ.
ಮನೆಯ ಕ್ಯಾಪ್ಟನ್ ನಟಿ ಹಂಸಾ ವಿಶೇಷ ಅಧಿಕಾರ ಚಲಾಯಿಸಿ ನರಕದಲ್ಲಿರುವ ಒಬ್ಬರನ್ನು ಸ್ವರ್ಗಕ್ಕೆ ಹಾಗೂ ಸ್ವರ್ಗದಲ್ಲಿರುವ ಒಬ್ಬರನ್ನು ನರಕದ ಮನೆಗೆ ಕಳುಹಿಸುವಂತೆ ಸುದೀಪ್ ಸೂಚಿಸಿದರು. ಈ ಹಿನ್ನೆಲೆಯಲ್ಲಿ ನರಕದಲ್ಲಿದ್ದ ರಂಜಿತ್ ಕುಮಾರ್ ಸ್ವರ್ಗದ ಮನೆಗೆ ಕಾಲಿಟ್ಟಿದ್ದಾರೆ.