ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲುಗಲ್ಲುಗಳಾದ ಟೈಟಾನಿಕ್, ಅವತಾರ್ ಮುಂತಾದ ಚಿತ್ರಗಳ ನಿರ್ಮಾಪಕ ಜಾನ್ ಲಂಡೌ ನಿಧನರಾಗಿದ್ದು ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಾನ್ ಲಂಡೌ 16 ತಿಂಗಳ ಹೋರಾಟದ ನಂತರ ಚಿಕಿತ್ಸೆ ಫಲಕಾರಿಯಾಗದೇ ಜುಲೈ 5ರಂದು ಲಾಸ್ ಏಂಜಲೀಸ್ ನಲ್ಲಿ ಅಸುನೀಗಿದ್ದಾರೆ.
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಕನಸುಗಳಿಗೆ ಬಣ್ಣ ತುಂಬಿದ್ದ ಜಾನ್ ಲಂಡೌ ಕ್ಯಾಮರೂನ್ ಅವರ ಲಿಂಗ್ ಸ್ಟ್ರೋಮ್ ಎಂಟರ್ ಟ್ರೈನ್ ಮೆಂಟ್ ಸಂಸ್ಥೆಯ ಸಿಒಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆಸ್ಕರ್ ವಿಜೇತ ಟೈಟಾನಿಕ್, ಅವತಾರ್, ಅವತಾರ್-2 ಚಿತ್ರಗಳನ್ನು ಜೇಮ್ಸ್ ಕೆಮರೂನ್ ಜೊತೆ ಪಾಲುದಾರಿಕೆಯಲ್ಲಿ ನಿರ್ಮಿಸಿದ್ದರು.
27 ವರ್ಷಗಳ ಕಾಲ ಜೇಮ್ಸ್ ಕ್ಯಾಮರೂನ್ ಜೊತೆ ಪಾಲುದಾರರಾಗಿದ್ದ ಜಾನ್, ಪ್ರೊಡಾಕ್ಷನ್ ವಿಭಾಗದಲ್ಲಿ ಕೆಲಸ ಆರಂಭಿಸಿದ್ದು, 29ನೇ ವಯಸ್ಸಿಗೆ 20 ಸೆಂಚೂರಿನ್ ಫಾಕ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಸೆಂಚೂರಿಯನ್ ಫಾಕ್ಸ್ ಸಂಸ್ಥೆಯಲ್ಲಿ ಹೋಮ್ ಎಲೋನ್, ಹೋಮ್ ಎಲೋನ್-2, ಮಿಸ್ಟರ್ ಡಬ್ ಫೈರ್, ಸ್ಪೀಡ್ ಮುಂತಾದ ಸೂಪರ್ ಹಿಟ್ ಚಿತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದರು.