ಕುಸ್ತಿಪಟು ವಿನೇಶ್ ಪೊಗಟ್ ಅನರ್ಹ ವಿವಾದದ ಕುರಿತ ತೀರ್ಪನ್ನು ಪ್ಯಾರಿಸ್ ಒಲಿಂಪಿಕ್ಸ್ ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಆಗಸ್ಟ್ 11ಕ್ಕೆ ಮುಂದೂಡಿದೆ.
50 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಅನರ್ಹಗೊಳಿಸಲಾಗಿತ್ತು. ಕೂದಲೆಳೆ ಅಂತರದಿಂದ ಕನಿಷ್ಠ ಬೆಳ್ಳಿ ಪದಕ ಕೈ ತಪ್ಪಿದ ಹಿನ್ನೆಲೆಯಲ್ಲಿ ಭಾರತ ಹಾಗೂ ವಿನೇಶ್ ಪೊಗಟ್ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಶನಿವಾರ ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ತೀರ್ಪನ್ನು ಆಗಸ್ಟ್ 11 ಅಂದರೆ ಭಾನುವಾರಕ್ಕೆ ಮುಂದೂಡಿದೆ.
ವಿನೇಶ್ ಪೊಗಟ್ ಫೈನಲ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಎರಡು ಬೆಳ್ಳಿ ಪದಕ ಘೋಷಿಸಿ ಒಂದು ತಮಗೆ ನೀಡಬೇಕು ಎಂದು ಮನವಿ ಮಾಡಿದ್ದರು.