ಮೂರನೇ ಮಹಾಯುದ್ಧದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ನಾಸ್ಟ್ರಡಾಮಸ್, ಬಾಬಾ ವೆಂಗಾ ಸೇರಿದಂತೆ ಹಲವಾರು ಖ್ಯಾತ ಜ್ಯೋತಿಷ್ಯರ ಭವಿಷ್ಯವಾಣಿ ಕೂಡ ಕುತೂಹಲ ಕೆರಳಿಸಿದೆ.
ಒಂದು ಕಡೆ ರಷ್ಯಾ-ಉಕ್ರೇನ್ ಯುದ್ಧ ಮತ್ತೊಂದೆಡೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಯುದ್ಧ ಮತ್ತೊಂದೆಡೆ ಇರಾನ್ ಅಧ್ಯಕ್ಷರ ಸಾವುಗಳಿಂದ ಮೂರನೇ ಮಹಾಯುದ್ಧದ ಬಗ್ಗೆ ಆತಂಕ ಸೃಷ್ಟಿಸುತ್ತಿದೆ. ಇದರ ನಡುವೆ ಭಾರತದ ಜ್ಯೋತಿಷಿಯೊಬ್ಬರು ಮೂರನೇ ಮಹಾಯುದ್ಧ ಆರಂಭದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಕುಶಾಲ್ ಕುಮಾರ್ ಎಂಬ ಜ್ಯೋತಿಷಿ ಮೂರನೇ ಮಹಾಯುದ್ಧ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ.
ಮೇ 8ರಿಂದ ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಕಾರ್ಮೋಡ ಆವರಿಸಿದೆ. ಹಲವಾರು ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಚೀನಾ, ದಕ್ಷಿಣ ಕೊರಿಯಾ, ತೈವಾನ್ ಸೇರಿದಂತೆ ಮುಂತಾದ ದೇಶಗಳಿಗೆ ಹಬ್ಬುವ ಸಾಧ್ಯತೆ ಇದೆ. ಅಧಿಕಾರಕ್ಕಾಗಿ ಯುದ್ಧಗಳು ನಡೆಯುವ ಸಾಧ್ಯತೆ ಇದೆ ಎಂದು ಕುಶಾಲ್ ಕುಮಾರ್ ಹೇಳಿದ್ದಾರೆ.
ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಜೂನ್ 18, 2024 ಮೂರನೇ ಮಹಾಯುದ್ಧ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೇ ಜೂನ್ 10 ಮತ್ತು 29ರಂದು ಕೂಡ ಆರಂಭವಾಗುವ ಸಾಧ್ಯತೆ ಇದೆ ಎಂದು ಅವರು ಮಹಾಯುದ್ಧದ ಸ್ಪಷ್ಟ ದಿನಾಂಕ ಸೂಚಿಸಿದ್ದಾರೆ.