Thursday, November 21, 2024
Google search engine
Homeಅಪರಾಧಕಲಬುರಗಿ: ಅಣ್ಣನ ಮೇಲಿನ ಸಿಟ್ಟಿಗೆ ತಮ್ಮನ ಹತ್ಯೆ

ಕಲಬುರಗಿ: ಅಣ್ಣನ ಮೇಲಿನ ಸಿಟ್ಟಿಗೆ ತಮ್ಮನ ಹತ್ಯೆ

ಅಣ್ಣನ ಮೇಲಿನ ಸಿಟ್ಟಿಗೆ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಮರಳಿದ್ದ ತಮ್ಮನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುಗರಿಯ ನಾಗನಹಳ್ಳಿಯಲ್ಲಿ ಸುಮಿತ್ (18) ಹತ್ಯೆಯಾಗಿದ್ದಾನೆ.

ಸುಮಿತ್ ಮುಂಬೈನಲ್ಲಿ ಓದುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೇ ತಾಯಿಯೊಂದಿಗೆ ತವರಿಗೆ ಮರಳಿದ್ದ. ಶನಿವಾರ ನಡೆದ ಜಗಳದಲ್ಲಿ ದುಷ್ಕರ್ಮಿಗಳು ಸುಮಿತ್ ಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ.

ಅಣ್ಣ ಸಚಿನ್ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯದಲ್ಲಿ ಗಲಾಟೆ ನಡೆದಿದ್ದು, ದುಷ್ಕರ್ಮಿಗಳು ಅಣ್ಣನ ಮೇಲಿನ ಸಿಟ್ಟಿಗೆ ತಮ್ಮನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments