ಶಿವಸೇನೆಯ ಉದ್ಧವ್ ಠಾಕ್ರೆಗೆ ದ್ರೋಹ ಮಾಡಿದ್ದು ನೋವು ತಂದಿದೆ ಎಂದು ಶಂಕರಾಚಾರ್ಯ ಸ್ವಾಮೀಜಿಗೆ ಪ್ರತಿಕ್ರಿಯೆ ನೀಡಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವಾತ್ ರಾಜಕಾರಣಿಗಳು ಗೋಲ್ ಕಪ್ಪ ಮಾರಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾತನಾಡಿದ್ದ ಶಂಕರಾಚಾರ್ಯ ಮಠದ ಹಿರಿಯ ಸ್ವಾಮೀಜಿ ಅವಿಮುಕ್ತೇಶ್ವರಾನಂದ ಸರಸ್ವತಿ ನಂತರ ದ್ರೋಹ ಮಾಡಿ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳಲಾಗಿದೆ. ಇದು ನಮಗೂ ಬೇಸರ ತರಿಸಿದೆ. ಮಹಾರಾಷ್ಟ್ರದ ಜನರು ದ್ರೋಹವನ್ನು ಮರೆತಿಲ್ಲ. ಅವರು ದ್ರೋಹಿಗಳಿಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ರಾಣವತ್, ರಾಜಕಾರಣದಲ್ಲಿ ಇದೆಲ್ಲಾ ಮಾಮೂಲು. ಸಂವಿಧಾನದಲ್ಲಿ ಮೈತ್ರಿ ಸರ್ಕಾರಕ್ಕೆ ಅವಕಾಶವಿದೆ. ಕಾಂಗ್ರೆಸ್ 1907 ಮತ್ತು 1971ರಲ್ಲಿ ದೇಶವನ್ನು ಇಬ್ಭಾಗ ಮಾಡಿತು. ರಾಜಕಾರಣಿಗಳು ರಾಜಕಾರಣ ಮಾಡದೇ ಗೊಲ್ ಕಪ್ಪಾ ಮಾರಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ನಮಗೆ ರಾಜಕೀಯದಿಂದ ಏನೂ ಆಗಬೇಕಿಲ್ಲ. ಆದರೆ ಹಿಂದುಗಳ ಹೆಸರಿನಲ್ಲಿಯೇ ಹಿಂದುಗಳಿಗೆ ದ್ರೋಹ ಆಗುವುದನ್ನು ಜನರು ಸಹಿಸುವುದಿಲ್ಲ. ಹಿಂದೂ ದ್ರೋಹ ಎಸಗುವುದಿಲ್ಲ. ಹಾಗೆ ಮಾಡುವವನು ಹಿಂದೂ ಆಗಲಾರ. ದ್ರೋಹ ಸಹಿಸುವವನೇ ನಿಜವಾದ ಹಿಂದು. ಹಿಂದೂತ್ವದ ಹೆಸರಿನಲ್ಲಿ ದ್ರೋಹ ಎಸಗಿದ್ದಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಶಂಕರಾಚಾರ್ಯ ಸ್ವಾಮೀಜಿ ಹೇಳಿದ್ದರು.