ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದ ೆಕಂಗನಾ ರಾಣಾವತ್ ಗೆ ಕಪಾಳಮೋಕ್ಷ ಮಾಡಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಯೋಧೆ ಕುಲ್ವಿಂದರ್ ಕೌರ್ ಅವರನ್ನು ನೆಲಮಂಗಲಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿಐಎಸ್ ಎಫ್ ಯೋಧೆಯಾದ ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಜೂನ್ 7ರಂದು ನಟಿ ಕಂಗನಾ ರಾಣಾವತ್ ಅವರಿಗೆ ಕಪಾಳಕ್ಕೆ ಬಾರಿಸಿದ್ದರು.
ಘಟನೆ ಹಿನ್ನೆಲೆಯಲ್ಲಿ ಕುಲ್ವಿಂದರ್ ಕೌರ್ ಅವರನ್ನು ತಕ್ಷಣವೇ ಅಮಾನತು ಮಾಡಲಾಗಿತ್ತು. ಇಲಾಖಾ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಅಮಾನತು ಶಿಕ್ಷೆಯನ್ನು ವಾಪಸ್ ಪಡೆದಿರುವ ಸಿಐಎಸ್ ಎಫ್ ಚಂಡೀಗಢದಿಂದ ವರ್ಗಾವಣೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ ನೆಲಮಂಗಲದ ಸಿಐಎಸ್ ಎಫ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಂಗನಾ ರಾಣಾವತ್ ರೈತ ವಿರೋಧಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಕುಲ್ವಿಂದರ್ ಕೌರ್ ಕಪಾಳಕ್ಕೆ ಬಾರಿಸಿದ್ದಾಗಿ ಹೇಳಿಕೊಂಡಿದ್ದರು.