ತನ್ನ ಮೇಲೆ ರೇಪ್ ಅಥವಾ ಕೊಲೆ ಮಾಡಿದ್ದರೆ ಚೆನ್ನಾಗಿರುತ್ತಿತ್ತಾ ಎಂದು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವಾತ್ ಹೇಳಿದ್ದಾರೆ.
ತನಗೆ ಕಪಾಳಮೋಕ್ಷ ಮಾಡಿದ ಘಟನೆ ಕುರಿತು ಬಾಲಿವುಡ್ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪೋಸ್ಟ್ ಡಿಲಿಟ್ ಮಾಡಿದ್ದ ಕಂಗನಾ ರಾಣವತ್, ಇದೀಗ ಹೊಸ ಪೋಸ್ಟ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನನ್ನ ಮೇಲೆ ನಡೆದ ಹಲ್ಲೆಯನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಬೇಕಿದೆ. ಯಾವುದೋ ಒಬ್ಬ ವೈಯಕ್ತಿಕ ಹಾಗೂ ವ್ಯಕ್ತಿತ್ವದ ಮೇಲೆ ಹಲ್ಲೆ ಮಾಡುವುದನ್ನು ಸಹಿಸಲು ಸಾಧ್ಯವೇ? ಇದು ಕ್ರಿಮಿನಲ್ ಅಪರಾಧ ಅಲ್ಲವೇ ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಡುಕ ಮತ್ತು ದರೋಡೆಕೋರ ತನ್ನದೇ ಆದ ಬಲಿಷ್ಠ ಆಲೋಚನೆ ಹೊಂದಿರುತ್ತಾನೆ. ದೈಹಿಕ, ಮಾನಸಿಕ ಮತ್ತು ಹಣದ ಕಾರಣಕ್ಕಾಗಿ ಅವರು ಕ್ರಿಮಿನಲ್ ಆಗಿರುತ್ತಾರೆ. ಯಾವುದೇ ಕಾರಣ ಇಲ್ಲದೇ ಅಪರಾಧ ನಡೆಯಲು ಸಾಧ್ಯವಿಲ್ಲ. ಆದರೂ ಜೈಲಿಗೆ ಹಾಕಲು ಕಾರಣ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.