ಕನ್ನಡಿಗ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರಶಸ್ತಿಯನ್ನು ಮುನ್ನಡೆಸಲು ವಿಫಲವಾಗಿದ್ದು ಹಾಗೂ ನಾಯಕತ್ವದ ಬಗ್ಗೆ ಮಾಲೀಕ ಗೋಯೆಂಕಾ ಅಪಮಾನ ಮಾಡಿದ ಘಟನೆಯಲ್ಲಿ ಕೆಎಲ್ ರಾಹುಲ್ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿತ್ತು.
ಇತ್ತೀಚೆಗಷ್ಟೇ ಗೋಯೆಂಕಾ ತಂಡದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದರು. ಆದರೆ ಇದೀಗ ಐಪಿಎಲ್ ಹರಾಜಿಗಾಗಿ ಬಿಡುಗಡೆ ಮಾಡಲಾದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೂಡ ಸ್ಥಾನ ಪಡೆದಿದ್ದಾರೆ. ಈ ಮೂಲಕ ಲಕ್ನೋ ತಂಡದ ಸಂಬಂಧವನ್ನು ಕೆಎಲ್ ರಾಹುಲ್ ಕಡಿದುಕೊಂಡಿದ್ದಾರೆ.
ಈ ಮೂಲಕ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಗೆ ಬಂದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
ಕಳೆದ ಐಪಿಎಲ್ ಆವೃತ್ತಿಗೂ ಮುನ್ನ ವಿರಾಟ್ ಕೊಹ್ಲಿ ಸುಮ್ಮನೆ ಬಂದುಬಿಡು ಎಂದು ಕೆಎಲ್ ರಾಹುಲ್ ಆಹ್ವಾನ ನೀಡಿದ್ದರು. ಆದರೆ ಕೆಎಲ್ ರಾಹುಲ್ ಆರ್ ಸಿಬಿಗೆ ಮರಳಲು ಹಿಂದೇಟು ಹಾಕಿದ್ದರು. ಇದೀಗ ಮತ್ತೆ ಅವಕಾಶದ ಬಾಗಿಲು ತೆಗೆದಿದ್ದು, ಆರ್ ಸಿಬಿ ತಂಡಕ್ಕೆ ಮರಳುವುದು ಅಲ್ಲದೇ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ 40 ವರ್ಷ ದಾಟಿದ ಫಾಫ್ ಡು ಪ್ಲೆಸಿಸ್ ಮತ್ತು ಕಳೆದ ಆವೃತ್ತಿಯಲ್ಲಿ ಸಂಪೂರ್ಣ ವಿಫಲರಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ತಂಡ ಕೈಬಿಟ್ಟಿದೆ. ದುಬಾರಿ ಆಟಗಾರರಾಗಿದ್ದ ಇವರನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳಲಿದ್ದು, ಈ ಮೂಲಕ ಹೊಸ ತಂಡ ರಚನೆಗೆ ಮುಂದಾಗಲಿದೆ ಎಂದು ಹೇಳಲಾಗಿದೆ.