Thursday, December 25, 2025
Google search engine
Homeರಾಜ್ಯಕಾಂಗ್ರೆಸ್ ಶಾಸಕರ ಮಹಾ ಕುಂಭಮೇಳ ಪ್ರವಾಸ ರದ್ದು!

ಕಾಂಗ್ರೆಸ್ ಶಾಸಕರ ಮಹಾ ಕುಂಭಮೇಳ ಪ್ರವಾಸ ರದ್ದು!

ಬೆಂಗಳೂರು: ಶಿಷ್ಟಾಚಾರ ಪಾಲನೆ ಮಾಡುವುದು ಕಷ್ಟ ಸಾಧ್ಯ ಎಂದು ಉತ್ತರ ಪ್ರದೇಶ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದ ಹಿನ್ನೆಲೆಯಲ್ಲಿ, ಕರ್ನಾಟಕದ ಶಾಸಕರ ಮಹಾ ಕುಂಭಮೇಳ ಪ್ರವಾಸ ರದ್ದುಗೊಂಡಿದೆ.

ವಿಧಾನಸಭೆ ವಸತಿ ಸಮಿತಿ ಸದಸ್ಯರು ಫೆಬ್ರವರಿ 23ರಿಂದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರವಾಸ ಹೊರಡುವವರಿದ್ದರು. ಆದರೆ ಫೆಬ್ರವರಿ 23ರಿಂದ ಆರಂಭ ಆಗಬೇಕಿದ್ದ ಪ್ರವಾಸವು ಶಿಷ್ಟಾಚಾರ ಪಾಲನೆ ಮಾಡುವುದು ಕಷ್ಟ ಸಾಧ್ಯ ಎಂಬ ಪತ್ರದ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.

ವಿಧಾನಸಭೆಯ ವಸತಿ ಸಮಿತಿ ಸದಸ್ಯರಾದ 13 ಶಾಸಕರ ಪ್ರವಾಸದ ಬಗ್ಗೆ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಅಧ್ಯಯನ ಪ್ರವಾಸದ ಹೆಸರಿನಲ್ಲಿ ಪ್ರಯಾಗರಾಜ್‌ಗೆ ತೆರಳಲು ತೀರ್ಮಾನ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ವಿಧಾನಪರಿಷತ್ ಭರವಸೆ ಸಮಿತಿಯ ಸದಸ್ಯರೂ ಮಹಾ ಕುಂಭಮೇಳಕ್ಕೆ ಪ್ರವಾಸ ಹೊರಟಿದ್ದಾರೆ. ಶಾಸಕರ ಪ್ರವಾಸಕ್ಕೆ ಸಾರ್ವಜನಿಕ ಟೀಕೆ ಸಹ ವ್ಯಕ್ತವಾಗಿತ್ತು.ಆದರೆ ಇದೀಗ ವಸತಿ ಸಮಿತಿ ಸದಸ್ಯರ ಪ್ರವಾಸಕ್ಕೆ ಉತ್ತರಪ್ರದೇಶ ಸರ್ಕಾರದ ಕಡೆಯಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ, ಈ ಪ್ರವಾಸ ರದ್ದಾಗಿದೆ.

ಮಹಾ ಕುಂಭಮೇಳಕ್ಕೆ ಆಗಮಿಸುವ ಶಾಸಕರಿಗಾಗಿ ಶಿಷ್ಟಾಚಾರ ಪಾಲಿಸಲು ಅಸಾಧ್ಯ ಎಂದಿರುವ ಉತ್ತರಪ್ರದೇಶ ಸರ್ಕಾರದ ನಿರ್ಧಾರದಿಂದಾಗಿ, ಅನಿವಾರ್ಯವಾಗಿ ಶಾಸಕರ ಪ್ರವಾಸವನ್ನು ವಿಧಾನಸಭೆಯ ವಸತಿ ಸಮಿತಿ ರದ್ದು ಮಾಡಿದೆ.

ಪ್ರವಾಸ ಸಮಿತಿಯಲ್ಲಿ ಯಾರಿದ್ದರು?

ರುದ್ರಪ್ಪ ಲಮಾಣಿ, ಎಚ್ ಸಿ ಬಾಲಕೃಷ್ಣ, ಬಿ ನಾಗೇಂದ್ರ, ಬಿ ಶಿವಣ್ಣ ಶಿವರಾಂ ಹೆಬ್ಬಾರ್, ಸಿ ಪಿ ಯೋಗೇಶ್ವರ್ ಫಾತಿಮಾ, ಭಾಗೀರಥಿ ಮುರಳ್ಯ, ಸಿಮೆಂಟ್ ಮಂಜು, ಚಂದ್ರು ಲಮಾಣಿ, ಧೀರಜ್ ಮುನಿರಾಜು.

ಸ್ವರೂಪ್ ಪ್ರಕಾಶ್ ಭೀಮನ ಗೌಡ ಸದಸ್ಯರುವಿಧಾನಪರಿಷತ್ ಭರವಸೆ ಸಮಿತಿಯ ಸದಸ್ಯರು ಈಗಾಗಲೇ ಪ್ರಯಾಗರಾಜ್ ಹಾಗೂ ಅಯೋಧ್ಯೆಗೆ ಪ್ರವಾಸ ತೆರಳಿದ್ದಾರೆ. ವಿಧಾನಪರಿಷತ್ ಭರವಸೆ ಸಮಿತಿ ಸದಸ್ಯರ ಅಧ್ಯಯನ ಪ್ರವಾಸದ ಹೆಸರಿನಲ್ಲಿ ತೀರ್ಥಯಾತ್ರೆ ಹಮ್ಮಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ. ಶರವಣ ನೇತೃತ್ವದಲ್ಲಿ ಸದಸ್ಯರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. 6 ದಿನಗಳ ಪ್ರವಾಸದಲ್ಲಿ ಮಹಾ ಕುಂಭಮೇಳ ಸೇರಿದಂತೆ ಉತ್ತರ ಪ್ರದೇಶದಲ್ಲಿ ತೀರ್ಥಯಾತ್ರೆ ನಡೆಸಲಿದ್ದಾರೆ.

ಭಾನುವಾರದಿಂದ ಫೆಬ್ರವರಿ 22ರವರೆಗೆ ಉತ್ತರ ಪ್ರದೇಶ ಮತ್ತು ದೆಹಲಿಗೆ ಸಮಿತಿ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ. ಆದರೆ ಇದೀಗ ವಸತಿ ಸಮಿತಿಯ ಶಾಸಕರ ಮಹಾ ಕುಂಭಮೇಳ ಪ್ರವಾಸ ಮಾತ್ರ ರದ್ದಾಗಿದೆ.ಈಗಾಗಲೇ ಕರ್ನಾಟಕದಿಂದ ಹಲವು ರಾಜಕೀಯ ಗಣ್ಯರು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾಮ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ಸ್ಪೀಕರ್‌ ಯುಟಿ ಖಾದರ್‌ ಅವರು ಮಹಾಕುಂಭ ಮೇಳಕ್ಕೆ ವೈಯಕ್ತಿಕ ಪ್ರವಾಸ ಪೂರ್ಣಗೊಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments