ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ನವೆಂಬರ್ 20 ಗುರುವಾರ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ಜಿತೇಂದ್ರ ಕುಮಾರ್ ನೇತೃತ್ವದ ಎಸ್ ಐಟಿ ಕಳೆದ ಮೂರು ತಿಂಗಳಿಗೂ ಅಧಿಕ ಸಮಯದಿಂದ ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸಿದ್ದು, ಇದೀಗ ಬೆಳ್ತಂಗಡಿ ಸೆಷನ್ಸ್ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದೆ.
ಧರ್ಮಸ್ಥಳದ ನೇತ್ರಾವತಿ ನದಿ ದಂಡೆಯ ಮೇಲೆ ಸುಮಾರು 15 ಕಡೆ ಶವಗಳ ಶೋಧ ನಡೆಸಿದ್ದ ಎಸ್ ಐಟಿ ಪೊಲೀಸರು ಕೆಲವು ಕಡೆ ಶವಗಳ ಆವಶೇಷಗಳನ್ನು ಪತ್ತೆ ಹಚ್ಚಿದ್ದರು. ಕಳೇಬರದ ವಿಧಿವಿಜ್ಞಾನ ವರದಿ ಕೂಡ ಕೈ ಸೇರಿದೆ ಎಂದು ಹೇಳಲಾಗಿದೆ.
ಗುರುವಾರ ಸಲ್ಲಿಸಲಿರುವ ಚಾರ್ಜ್ ಶೀಟ್ ನಲ್ಲಿ ಶವ ಹೂತಿಟ್ಟೆ ಎಂದು ಹೇಳಿಕೆ ನೀಡಿದ್ದ ಚಿನ್ನಯ್ಯ, ಜಯಂತ್, ವಿಠಲ್ ಗೌಡ, ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೋಡಿ ಮತ್ತೊಬ್ಬ ವ್ಯಕ್ತಿ ಸೇರಿದಂತೆ 6 ಮಂದಿಯ ವಿರುದ್ಧ ದೋಷಾರೋಪ ಮಾಡಲಿದೆ ಎಂದು ಹೇಳಲಾಗಿದೆ.


