ಧಾರವಾಡದಿಂದ ಬೆಂಗಳೂರಿಗೆ ಬರುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಣೆಯಿಂದ ಭಾರೀ ದುರಂತ ತಪ್ಪಿದಂತಾಗಿದೆ.
ದಾರವಾಡದಿಂದ ಬರುತ್ತಿದ್ದ ವಂದೇ ಭಾರತ್ ರೈಲು ದಾವಣಗೆರೆ ನಿಲ್ದಾಣದ ಬಳಿ ಚಕ್ರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ರೈಲು ಕೂಡಲೇ ಕೆಟ್ಟು ನಿಂತಿದೆ.
ವಂದೇ ಭಾರತ್ ರೈಲು ಕೆಟ್ಟು ನಿಂತಿದ್ದರಿಂದ ಕೂಡಲೇ ಪ್ರಯಾಣಿಕರನ್ನು ಹೊರಗೆ ಇಳಿಸಲಾಗಿದ್ದು, ನಂತರ ಶತಾಬ್ದಿ ರೈಲಿನಲ್ಲಿ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.
ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ರೈಲು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.


