2024-25ನೇ ಸಾಲಿನ ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಶೇ.66.1ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ.8ರಷ್ಟು ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದೇ ಮೊದಲ ಬಾರಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.
ಶೇ.92.12ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಉಡುಪಿ (ಶೇ.89.96) ಎರಡನೇ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ (ಶೇ.83.19), ಶಿವಮೊಗ್ಗ (ಶೇ.82.29) ಹಾಗೂ ಕೊಡಗು (ಶೇ.82.21) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರೆ, ಕಲಬುರಗಿ (ಶೇ.42.23) ಕೊನೆಯ ಸ್ಥಾನ ಗಳಿಸಿದೆ.
2025 ಮಾರ್ಚ್ 21ರಿಂದ ಏಪ್ರಿಲ್ 4 ರವರೆಗೆ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು. 4,61563 ಹುಡುಗರು ಮತ್ತು 4,34,884 ಹುಡಗಿಯರು ಪರೀಕ್ಷೆ ಬರೆದಿದ್ದರು. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಲಭ್ಯವಿದ್ದು, https://karresults.nic.in ಜಾಲತಾಣದಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಸದ್ಯ ಪಾಸಾಗಿರುವ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
625ಕ್ಕೆ 625 ಅಂಕ ಪಡೆದ ಕೆಲವು ವಿದ್ಯಾರ್ಥಿಗಳ ವಿವರ ಹೀಗಿದೆ.
ನಮನಾ ಕೆ., ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ
ನಿತ್ಯಾ ಎಂ. ಕುಲಕರ್ಣಿ, ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಶಿವಮೊಗ್ಗ
ನಂದನ್, ರಾಷ್ಟ್ರೀಯ ಅಕಾಡೆಮಿ ಪ್ರೌಢಶಾಲೆ, ಹಿರಿಯೂರು
ಮೌಲ್ಯ, ರಾಷ್ಟ್ರೀಯ ಅಕಾಡೆಮಿ ಪ್ರೌಢಶಾಲೆ, ಹಿರಿಯೂರು
ಅಕೀಲ್ ಅಹ್ಮದ್ ನದಾಫ್, ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆ, ಮುದ್ದೇಬಿಹಾಳ
ಧನುಷ್ ಎಸ್, ಮರಿಮಲ್ಲಪ್ಪ ಹೈಸ್ಕೂಲ್, ಮೈಸೂರು
ಸಹಿಷ್ಣು ಎನ್, ಆದಿಚುಂಚನಗಿರಿ ಹೈಸ್ಕೂಲ್, ಶಿವಮೊಗ್ಗ
ರೂಪಾ ಚನ್ನಗೌಡ ಪಾಟೀಲ್, ದೇವಲಾಪುರ, ಬೈಲಹೊಂಗಲ
ನಮಿತಾ, ಮಾತಾ ಇಂಗ್ಲಿಷ್ ಹೈಸ್ಕೂಲ್, ಬೆಂಗಳೂರು
ಜಾನ್ಹವಿ ಎಸ್. ಎಸ್, ವಿಜಯ ಭಾರತಿ ವಿದ್ಯಾಲಯ, ಬೆಂಗಳೂರು
ಮಸ್ತೂರ್ ಆದಿಲ್, ಚೇತನ ವಿದ್ಯಾಮಂದಿರ, ತುಮಕೂರು
ಉತ್ಸವ್ ಪಟೇಲ್, ವಿಜಯ ಶಾಲೆ, ಹಾಸನ


