ಬೆಂಗಳೂರು: ರಾಜಧಾನಿ ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ 29 ಸ್ಥಳಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ 22 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.
ಬೆಂಗಳೂರು ಗ್ರಾಮಾಂತರದ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಅಭಿಯಂತರ ಹೆಚ್.ಎಂ.ಜನಾರ್ಧನ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ ದಾಸ್ ಹೆಗಡೆ, ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರ್ಜುನ ಆರ್.ಹೆಚ್ ಹಾಗೂ ಧಾರವಾಡದ ಭೂದಾಖಲೆಗಳ ಸರ್ವೇಯರ್ ಸೋಮಲಿಂಗಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.
12 ಕೋಟಿ ಸರದಾರ:
ಪುರುಷೋತ್ತಮ ದಾಸ್ ಹೆಗಡೆ ಅವರ ಬಳಿ 1 ನಿವೇಶನ, 2 ವಾಸದ ಮನೆಗಳು, 2 ಶಿಕ್ಷಣ ಸಂಸ್ಥೆಗಳು, 11 ಎಕರೆ 30 ಗುಂಟೆ ಜಮೀನು,44,23 ಲಕ್ಷನಗದು, 60,79,630 ಬೆಲೆ ಬಾಳುವ ಚಿನ್ನಾಭರಣಗಳು ಪತ್ತೆಯಾಗಿದೆ.
ಪುರುಷೋತ್ತಮ ದಾಸ್ ಹೆಗಡೆ, ಕಾರ್ಯಪಾಲಕ ಅಭಿಯಂತರ
ಇವರಿಗೆ ಸೇರಿದ 14 ಸ್ಥಳಗಳಲ್ಲಿ ಕೈಗೊಂಡ ಶೋಧದಲ್ಲಿ 1 ನಿವೇಶನ, 2 ವಾಸದ ಮನೆಗಳು, 2 ಶಿಕ್ಷಣ ಸಂಸ್ಥೆಗಳು, 11 ಎಕರೆ 30 ಗುಂಟೆ ಕೃಷಿ ಜಮೀನು, 44,23 ಲಕ್ಷ ನಗದು 60,79,630 ರೂ ಮೌಲ್ಯದ ಚಿನ್ನಾಭರಣಗಳು, 27 ಲಕ್ಷ ನಿಶ್ಚಿತ ಠೇವಣಿ ಸೇರಿ 12,84,33,885 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಹೆಚ್. ಎಂ ಜನಾರ್ಧನ, ಅಧೀಕ್ಷಕ ಅಭಿಯಂತರರು ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ಇವರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ಕೈಗೊಂಡು 1 ನಿವೇಶನ, 3 ವಾಸದ ಮನೆಗಳು,34 ಎಕರೆ ಕೃಷಿ ಜಮೀನು , 1,70 ಕೋಟಿ ನಗದು,7,08,262 ರೂ ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ಮೌಲ್ಯದ- ವಾಹನಗಳು 60 ಲಕ್ಷ ಮೌಲ್ಯದ ವಸ್ತುಗಳು ಸೇರಿ 4,77,39,262 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಅರ್ಜುನ್, ಆರ್. ಹೆಚ್. ಎ.ಇ.ಇ (ಸಿವಿಲ್). ಬೆಸ್ಕಾಂ, ದಾವಣಗೆರೆ.
ಇವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನಗಳು, 3 ವಾಸದ ಮನೆಗಳು, 2 ಎಕರೆ 20 ಗುಂಟೆ ಕೃಷಿ ಜಮೀನು,800/- ನಗದು, 2,49,100 ರೂ ಬೆಲೆ ಬಾಳುವ ಚಿನ್ನಾಭರಣಗಳು 16,20 ಲಕ್ಷ ಬೆಲೆ ಬಾಳುವ ವಾಹನಗಳು 13 ಲಕ್ಷ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ 2,49,41,400 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್, ಸರ್ವೆ ಸೂಪರ್ ವೈಸರ್, ಎ.ಡಿ.ಎಲ್.ಆರ್. ಕಛೇರಿ, ಧಾರವಾಡ.
ಇವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ಕೈಗೊಂಡು 3 ನಿವೇಶನಗಳು, 1 ವಾಸದ ಮನೆ, 3 ಎಕರೆ ಕೃಷಿ ಜಮೀನು, 82,840 ನಗದು, ರೂ 35,41 ಲಕ್ಷ ಮೌಲ್ಯದ ಚಿನ್ನಾಭರಣಗಳು,14,90 ಲಕ್ಷ ಬೆಲೆ ಬಾಳುವ ವಾಹನಗಳು, ರೂ. 50 ಲಕ್ಷ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ 2.64,82,840 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.


