ಬಾಲಕಿಗೆ ಬಲವಂತವಾಗಿ ಮುತ್ತು ಕೊಟ್ಟ ವಿವಾಹಿತ ಅದಕ್ಕೆ ಪ್ರತಿಫಲ ಅನುಭವಿಸಿದ್ದು, ನಾಲಗೆ ಕಳೆದುಕೊಂಡು ವಿಲವಿಲ ಒದ್ದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾನ್ಪುರದ ವಿವಾಹಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ಕಡೆ ನೋವು ಅನುಭವಿಸುತ್ತಿದ್ದರೆ ಮತ್ತೊಂದೆಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.
ಸೋಮವಾರ ಬಾಲಕಿ ಮತ್ತಿಬ್ಬರು ಮೈದಾನದಲ್ಲಿ ಆಡುತ್ತಿದ್ದರು. ಈ ವೇಳೆ ಮದುವೆ ಆಗಿ ಎರಡು ಮಕ್ಕಳನ್ನು ಹೊಂದಿರುವ ವಿವಾಹಿತ ಚಂಪಿ ಬಾಲಕಿಯೊಬ್ಬಳನ್ನು ಹಿಡಿದು ಆಕೆಯ ಪ್ರತಿಭಟನೆನ ನಡುವೆಯೂ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ. ಈ ವೇಳೆ ಬಾಲಕಿ ವಿವಾಹಿತನನ ನಾಲಗೆ ಬಲವಾಗಿ ಕಚ್ಚಿದ್ದಾಳೆ.
ಬಾಲಕಿ ನಾಲಗೆ ಕಚ್ಚಿದ್ದರಿಂದ ರಕ್ತಸ್ರಾವ ಉಂಟಾಗಿದ್ದು, ವಿವಾಹಿತ ನೆಲದ ಬಿದ್ದು ಒದ್ದಾಡಲು ಆರಂಭಿಸಿದ. ಮೂಲಗಳ ಪ್ರಕಾರ ಹಲವು ಸಮಯದಿಂದ ಚಂಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕುಟುಂಬದವರು ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಆತ ತನ್ನ ನಡವಳಿಕೆ ಬದಲಾಯಿಸಿಕೊಂಡಿರಲಿಲ್ಲ.
ಬಾಲಕಿಯ ಸೋದರರು ಮನೆಯಲ್ಲಿ ಯಾರೂ ಇರಲಿಲ್ಲ. ಇಬ್ಬರೂ ಊರ ಹೊರಗೆ ಹೋಗಿದ್ದಾಗ ಚಂಪಿ ತನ್ನ ಹಳೇ ಚಾಳಿ ಮುಂದುವರಿಸಿದ್ದರಿಂದ ಬಾಲಕಿ ರೊಚ್ಚಿಗೆದ್ದಿದ್ದಳು ಎಂದು ತಿಳಿದುಬಂದಿದೆ.
ಗಾಯಗೊಂಡ ಚಂಪಿಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲವು ಬಾರಿ ಕಿರುಕುಳ ನೀಡುತ್ತಿದ್ದ ಚಂಪಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದರಿಂದ ನಾಲಗೆ ಕಚ್ಚಿ ತುಂಡರಿಸುವ ಮೂಲಕ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಳು ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.


