ಬಾಗಲಕೋಟೆ: ನಮ್ಮನ್ನು ಉಚ್ಛಾಟನೆ ಮಾಡುವ ಅಧಿಕಾರ ೀ ಜಗತ್ತಿನಲ್ಲಿ ಯಾರಿಗೂ ಇಲ್ಲ. ಸೃಷ್ಟಿಕರ್ತ ಪರಮಾತ್ಮನಿಗೆ ಬಿಟ್ಟರೆ ಪರಮಾತ್ಮನ ಸ್ವರೂಪಿಯಾದ ಭಕ್ತರಿಗೆ ಮಾತ್ರ ಉಚ್ಛಾಟನೆ ಮಾಡುವ ಅಧಿಕಾರವಿದೆ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಸೋಮವಾರ ಕೂಡಲಸಂಗಮದಲ್ಲಿ ಕರೆಯಲಾಗಿದ್ದ ಖಂಡನಾ ಸಭೆಯಲ್ಲಿ ಪಾಲ್ಗೊಂಡ ಶ್ರೀಗಳು ಮಾತನಾಡಿ, ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ, ಪೀಠಕ್ಕೂ ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ ಎಂದು ಟ್ರಸ್ಟ್ ನಿರ್ಣಯದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಡಲಸಂಗಮದಲ್ಲೇ ಇರುತ್ತೇನೆ. ಇಲ್ಲಿಂದಲೇ ಮತ್ತೆ ಸಮಾಜದ ಸಂಘಟನೆ ಮಾಡುತ್ತೇನೆ. ಭಕ್ತರ ತೀರ್ಮಾನವೇ ಅಂತಿಮ ಎಂದ ಸ್ವಾಮೀಜಿ, ಸಮಾಜ ಬಾಂಧವರನ್ನ ಕೂಡಿಸುತ್ತೇನೆ. ಮುಂದೆ ಎಲ್ಲರೂ ಹೇಗೆ ಹೇಳುತ್ತಾರೆಯೋ ಹಾಗೆಯೇ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಯಾವುದೇ ಅಕ್ರಮ ಆಸ್ತಿ ಗಳಿಕೆ ಮಾಡಿಲ್ಲ, ಕೂಡಲಸಂಗಮದಲ್ಲಿ 13 ಗುಂಟೆ ಮತ್ತು ದಾವಣಗೆರೆಯಲ್ಲಿ ಭಕ್ತರು ಕೊಟ್ಟ 20 ಗುಂಟೆ ಜಾಗೆ ಮಾತ್ರ ನನ್ನ ಹೆಸರಲ್ಲಿದೆ. ಮತ್ತೆಲ್ಲೂ ನನ್ನ ಹೆಸರಲ್ಲಿ ಆಸ್ತಿ ಇಲ್ಲ. ಒಂದು ವೇಳೆ ಜಾಗೆ ಮಾಡಬೇಕು ಅಂತ ಮನಸ್ಸು ಮಾಡಿದ್ದರೆ ಜಿಲ್ಲೆಗೊಂದು ಅಲ್ಲ, ಪ್ರತಿ ಗ್ರಾಮಕ್ಕೊಂದು ಆಸ್ತಿ ಮಾಡುತ್ತಿದ್ದೆ ಎಂದು ಟ್ರಸ್ಟ್ ಕಮೀಟಿ ಆರೋಪಕ್ಕೆ ತಿರುಗೇಟು ನೀದರು.
ಈ ಘಟನೆಯಿಂದ ನನ್ನ ಭಕ್ತರಿಗೆ ನೋವಾಗಿದೆ, ನನ್ನ ಭಕ್ತರಿಗೆ ನೋವಾಗಿದೆ ಅಂತ ನನಗೆ ನೋವಾಗಿದೆ, ವಿನಃ ಉಚ್ಛಾಟನೆ ಮಾಡಿದ್ರಲ್ಲಅಂತ ನಾನು ನೊಂದಿಲ್ಲ. ನಾನು ಇದೀಗ ಇನ್ನಷ್ಟು ಸ್ವತಂತ್ರನಾಗಿದ್ದೇನೆ ಎನ್ನುವ ಖುಷಿ ಇದೆ. ಪರ್ಯಾಯ ಪೀಠ ಕಟ್ಟಲ್ಲ, ಇದೇ ಪೀಠ ಇರುತ್ತೆ. ಟ್ರಸ್ಟ್ ಮಾತ್ರ ಅವ್ರಿಗೆ ಸಂಭಸಿದ್ದು, ಪೀಠ ಇದ್ದೆ ಇರುತ್ತೆ. ಹೊಸ ಮಠ ಕಟ್ಟುವ ಬಗ್ಗೆ ಹಿರಿಯರ ಸಭೆ ಕರೆಯುತ್ತೇನೆ, ನಂತರ ರಾಜ್ಯ ಮಟ್ಟದ ಭಕ್ತರ ಸಭೆ ಕರೆದು, ಭಕ್ತರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದರು. ಬಹುಶಃ ಹಾರೂಗೇರಿಯಿಂದ ಮೀಸಲಾತಿ ಹೋರಾಟ ಮತ್ತೆ ಆರಂಭಿಸಿದ್ದೇ ನನ್ನ ಉಚ್ಛಾಟನೆಗೆ ಕಾರವಾಗಿರಬಹದು ಎಂದು ತಿಳಿಸಿದರು.


