ಜಾತ್ರೆಗೆ ಬಂದಿದ್ದ ಮೂವರು ಮಕ್ಕಳು ಈಜಲು ನೀರಿಗಿಳಿದಿದ್ದಾಗ ಮುಳುಗಿ ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ವಿಸಿ ನಾಲೆಯಲ್ಲಿ ಮುಳುಗಿ ಮೈಸೂರಿನ ಗೌಸಿನಗರದ ಸೋನು (17) ಸಿಮ್ರಾನ್ (16) ಮತ್ತು ಸಿದ್ದೇಶ್ (9) ಮೃತಪಟ್ಟ ದುರ್ದೈವಿಗಳು.
ಚಿಕ್ಕಾಯರಹಳ್ಳಿಯ ಜಾತ್ರೆಗೆ ಕುಟುಂಬದ ಜೊತೆ ಬಂದಿದ್ದ ಮಕ್ಕಳು ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ. ಸೋನು ಮತ್ತು ಸಿದ್ದೇಶ್ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಸಿಮ್ರಾನ್ ದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ.


