ಬೆಂಗಳೂರು: ಕನ್ನಡದ ಮೇಲೆ ಹಿಂದಿ ಭಾಷೆಯನ್ನ ಹೇರಿಕೆ ಮಾಡಲಾಗುತ್ತಿದೆ. ಅನುದಾನ ನೀಡುವಲ್ಲಿ ತಾರತಮ್ಯ ತೋರುತ್ತಿದೆ. ಹಣ ಸರಿಯಾಗಿ ನೀಡುತ್ತಿಲ್ಲ. ಈ ಎಲ್ಲದರ ವಿರುದ್ಧ ಯುವ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕನ್ನಡ ಭಾಷೆ ವಿಷಯದಲ್ಲಿ ಮಲತಾಯಿ ಧೋರಣೆ ತಾಳುತ್ತಿದೆ. ಯುವ ಜನತೆ ಎದ್ದು ನಿಂತು ಕನ್ನಡವನ್ನ ಜಗತ್ತಿಗೆ ಪಸರಿಸಿ ಎಂದರು.
ನಮ್ಮ ಸವಾಲುಗಳನ್ನ ನಮ್ಮ ಅವಕಾಶಗಳನ್ನಾಗಿ ಮಾಡಿಕೊಳ್ಳಬೇಕು. ದೇಶದ ಹೂಡಿಕೆಯಲ್ಲಿ ಕರ್ನಾಟಕ ನಂ 1 ಇದೆ . ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಮದರಸಾಗಳಲ್ಲಿ ಕನ್ನಡ ಕಡ್ಡಾಯ
180 ಮದರಸಾಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. 483 ಕೋಟಿ ರೂ. ವೆಚ್ಚದಲ್ಲಿ ಉರ್ದು ಶಾಲೆಗಳನ್ನ ಅಭಿವೃದ್ದಿ ಮಾಡಲಾಗಿದೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಪ್ರತ್ಯೇಕ ವೈದ್ಯಕೀಯ ಶಾಲೆ ಆರಂಭ, 18 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.


