ಅರುಣಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಚೀನಾ ಗಡಿಗೆ ಹೊಂದಿರುವ ರಸ್ತೆ ಕುಸಿದುಬಿದ್ದಿದೆ.
ದಿಬಾಂಗ್ ಕಣಿವೆ ಜಿಲ್ಲೆಯನ್ನು ಸಂಪರ್ಕಿಸುವ ಏಕೈಕ ಹೆದ್ದಾರಿ ಭೂಕುಸಿತದಿಂದ ಕುಸಿದುಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ.
ರೋಯಿಂಗ್ ಅನಾನಿ ಹೆದ್ದಾರಿ ಇದಾಗಿದ್ದು, ಅನಾನಿ ಮತ್ತು ಹುನ್ಲಿ ನಡುವಿನ ಮಾರ್ಗವಾಗಿತ್ತು. ಭೂಕುಸಿತದ ಬಗ್ಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಾಂಡು ಆಘಾತ ವ್ಯಕ್ತಪಡಿಸಿದ್ದಾರೆ.