ಹಾಂಕಾಂಗ್ ಹಿಂದಿಕ್ಕಿದ ಭಾರತ ವಿಶ್ವದ 4ನೇ ಅತೀ ದೊಡ್ಡ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಮೊದಲ ಬಾರಿ ಪಾತ್ರವಾಗಿದೆ.
ಬಂಡವಾಳ ಹೂಡಿಕೆದಾರರ ಸ್ನೇಹಿಯಾಗಿರುವ ರೂಪುಗೊಂಡಿರುವ ಭಾರತದ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಷೇರು ವಿನಿಮಯ 4.33 ಟ್ರೆಲಿಯನ್ ಡಾಲರ್ ಗೆ ಜಿಗಿತ ಕಂಡಿತು. ಹಾಂಕಾಂಗ್ ನ 4.29 ಟ್ರೆಲಿಯನ್ ಡಾಲರ್ ಷೇರು ವಿನಿಮಯ ಹಿಂದಿಕ್ಕಿದ ಭಾರತ ವಿಶ್ವದ ಅತೀ ದೊಡ್ಡ ನಾಲ್ಕನೇ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಡಿಸೆಂಬರ್ 5ರಂದು ಭಾರತದ ಷೇರು ಮಾರುಕಟ್ಟೆ ಮೊದಲ ಬಾರಿ 4 ಟ್ರೆಲಿಯನ್ ಡಾಲರ್ ದಾಟಿತ್ತು. ಕಳೆದ 4 ವರ್ಷಗಳಲ್ಲಿ ಭಾರತದ ಈಕ್ವಿಟಿ ಷೇರು ಮಾರುಕಟ್ಟೆ ಈಗಿನ ಮೊತ್ತದ ಅರ್ಧದಷ್ಟು ಏರಿಕೆ ದಾಖಲಿಸಿತ್ತು.
ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಚಿಲ್ಲರೆ ಮಾರುಕಟ್ಟೆ ಹಣದುಬ್ಬರದ ಪರಿಣಾಮ ಭಾರತ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಬಂಡವಾಳ ಆಕರ್ಷಿಸುತ್ತಿದೆ ಎಂದು ಹೇಳಲಾಗಿದೆ.