Saturday, July 6, 2024
Google search engine
Homeತಾಜಾ ಸುದ್ದಿಪುರಿ ಜಗನ್ನಾಥ ಜಾತ್ರಾ ಮಹೋತ್ಸವದಲ್ಲಿ ಪಟಾಕಿ ಸ್ಫೋಟ: ಒಬ್ಬ ಭಕ್ತ ಸಾವು, 23 ಮಂದಿಗೆ ಗಾಯ

ಪುರಿ ಜಗನ್ನಾಥ ಜಾತ್ರಾ ಮಹೋತ್ಸವದಲ್ಲಿ ಪಟಾಕಿ ಸ್ಫೋಟ: ಒಬ್ಬ ಭಕ್ತ ಸಾವು, 23 ಮಂದಿಗೆ ಗಾಯ

ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಜಾತ್ರೆ ವೇಳೆ ಸ್ಫೋಟ ಸಂಭವಿಸಿದ್ದರಿಂದ ಒಬ್ಬ ಮೃತಪಟ್ಟು, 23 ಮಂದಿ ಗಾಯಗೊಂಡಿದ್ದಾರೆ.

ಬುಧವಾರ ರಾತ್ರಿ ಜಾತ್ರಾ ಮಹೋತ್ಸವದ ವೇಳೆ ಪಟಾಕಿ ಸಿಡಿಸುವ ವೇಳೆ ಸ‍್ಫೋಟ ಸಂಭವಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಪುರಿ ಜಗನ್ನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಗುಂಪೊಂದು ಪಟಾಕಿ ಹೊಡೆದು ಸಂಭ್ರಮಿಸುತ್ತಿತ್ತು. ಈ ವೇಳೆ ಪಟಾಕಿಯೊಂದು ಹಾರಿ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ಪಟಾಕಿಯ ಮೇಲೆ ಬಿದ್ದು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ನರೇಂದ್ರ ಪುಷ್ಪಕರ್ಣಿ ಬಳಿ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿ ಪಟಾಕಿ ಭಕ್ತರ ಮೇಲೆ ಚಿಮ್ಮಿತು. ಇದರಿಂದ ರಕ್ಷಿಸಿಕೊಳ್ಳಲು ಭಕ್ತರು ಪುಷ್ಕರಿಣಿಗೆ ಜಿಗಿದಿದ್ದಾರೆ.

ಘಟನೆಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments