Thursday, September 19, 2024
Google search engine
Homeತಾಜಾ ಸುದ್ದಿಬಿಹಾರದಲ್ಲಿ 17 ದಿನದಲ್ಲಿ ಕುಸಿದು ಬಿದ್ದ 12ನೇ ಸೇತುವೆ: ರಾಜ್ಯದ ಎಲ್ಲಾ ಸೇತುವೆಗಳ ಸಮೀಕ್ಷೆಗೆ ಸಿಎಂ...

ಬಿಹಾರದಲ್ಲಿ 17 ದಿನದಲ್ಲಿ ಕುಸಿದು ಬಿದ್ದ 12ನೇ ಸೇತುವೆ: ರಾಜ್ಯದ ಎಲ್ಲಾ ಸೇತುವೆಗಳ ಸಮೀಕ್ಷೆಗೆ ಸಿಎಂ ಆದೇಶ

ಒಂದೇ ದಿನ 2 ಕಡೆ ಸೇತುವೆಗಳು ಕುಸಿದುಬಿದ್ದ ವರದಿ ಬೆನ್ನಲ್ಲೇ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ಇದರಿಂದ ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ ಸಂಭವಿಸಿದ 12ನೇ ಸೇತುವೆ ಕುಸಿತ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರದಲ್ಲಿನ ಸತತವಾಗಿ ಸೇತುವೆಗಳು ಕುಸಿದು ಬೀಳುತ್ತಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೂ ಸೇತುವೆ ಕುಸಿತ ಪ್ರಕರಣ ಮುಂದುವರಿಯುತ್ತಲೇ ಇದೆ. ಇದರ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ ರಾಜ್ಯದ ಎಲ್ಲಾ ಸೇತುವೆಗಳ ಗುಣಮಟ್ಟ ಹಾಗೂ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸುವಂತೆ ಆದೇಶಿಸಿದ್ದಾರೆ.

ಸಿವಾನ್ ಜಿಲ್ಲೆಯನ್ನು ಸಂಪರ್ಕಿಸುವ ಸರಣ್ ಜಿಲ್ಲೆಯಲ್ಲಿ ಗಂಡಕಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ಬಿದ್ದಿದೆ. ಇದರಿಂದ ಸರಣಿ ಜಿಲ್ಲೆಯೊಂದರಲ್ಲೇ ಗರಿಷ್ಠ 3 ಸೇತುವೆಗಳು ಕುಸಿದು ಬಿದ್ದಂತಾಗಿದೆ.

ಗಂಡಕಿ ನದಿಗೆ ಅಡ್ಡಲಾಗಿದ್ದ ಕಟ್ಟಲಾಗಿದ್ದ ಎರಡು ಸೇತುವೆಗಳು ಕುಸಿದು ಬಿದ್ದಿವೆ. ಒಂದು ಸೇತುವೆ 2004ರಲ್ಲಿ ನಿರ್ಮಾಣವಾಗಿದ್ದಾದರೆ, ಮತ್ತೊಂದು ಸೇತುವೆ ಬ್ರಿಟಿಷರ ಕಾಲದಲ್ಲಿ ಅಂದರೆ ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.

ಮುಂಗಾರು ಮಳೆ ಅಬ್ಬರ ಆರಂಭವಾದ ಬೆನ್ನಲ್ಲೇ ಸೇತುವೆ ಕೆಳಗೆ ಸ್ವಚ್ಛತಾ ಕಾರ್ಯ ನಡೆಯುವಾಗ ಈ ಘಟನೆ ಸಂಭವಿಸಿದ್ದು, ಸೇತುವೆ ಕುಸಿತದಿಂದ ಯಾವುದೇ ಸಾವು-ನೋವು ವರದಿಯಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments